ಸಾಧನೆ ಪ್ರತಿದಿನ ಮಾಡುವಂತಾಗಲು ಒಂದು ಮಂತ್ರ ಕೊಡುವೆ. " ಸಾಧನೆ ಇಲ್ಲಾ , ತಿಂಡಿ ಇಲ್ಲಾ " ಎನ್ನುವುದೇ ಮಂತ್ರ - ನಿಮಗೆ ಮಾತ್ರ ಅಲ್ಲಾ ಇಡೀ ಕುಟುಂಬಕ್ಕೆ. ನಿಮ್ಮ ಪ್ರೀತಿ ಪಾತ್ರರೊಬ್ಬರಿಗೆ ಮಾತು ಕೊಡಿ, ಅದೇನೇ ಆಗಲಿ ಮುಂದಿನ 40 ದಿನಗಳ ಕಾಲ ನೀವು ಸತತವಾಗಿ ಸಾಧನೆ ಮಾಡುವಿರಿ ಎಂದು. ಮಾಡದಿದ್ದರೆ ಆ ದಿನ ಊಟ ಇಲ್ಲಾ. ಭಯ, ದುರಾಸೆ ಮತ್ತು ಪ್ರೀತಿ ಈ ಮೂರು ಸಾಕು ಒಂದು ಅಭ್ಯಾಸ ಬೆಳೆಸಲು ಅಥವಾ ಮುರಿಸಲು. ನಾನು ಪ್ರೀತಿಗೆ ಪ್ರಾಶಸ್ತ್ಯ ಕೊಡುವೆ. ಸಾಧನೆ ಮಾಡಿದಾಗ ಮತ್ತು ಮಾಡದಿದ್ದಾಗ ನಿಮ್ಮ ಮಾನಸಿಕ ಸ್ಥಿತಿ ಹೇಗಿರುವುದೆಂದು ಗಮನಿಸಿ. ನಿಮಗೆ ಸಾಧನೆ ನಿರಂತರವಾಗಿ ಮಾಡುವಂತೆ ಮಾಡಲು ಅದುವೇ ಸಾಕು.
ಸಾಧನೆ ಎಲ್ಲಾ ಕಲೆಯನ್ನು ಕಲಿಸುತ್ತದೆ, ಅದು ನಿಮ್ಮ ತಾಳ್ಮೆ ಹೆಚ್ಚಿಸುತ್ತದೆ, ಸಕಾರಾತ್ಮ ವನ್ನು ಹರಡುತ್ತದೆ, ಅದು ನಿಮ್ಮನ್ನು ಯಾವುದೇ ಸವಾಲಿಗೆ ತಯಾರಿ ಮಾಡಿಸುತ್ತದೆ. ಭಾರತೀಯ ಹೆಣ್ಣು ಮಕ್ಕಳ ಜೀವನ ಕಷ್ಟ, ಅನುಮಾನವೇ ಇಲ್ಲಾ. ಗಂಡ ಮತ್ತು ಅತ್ತೆ ಯ ನಿರೀಕ್ಷೆಗಳ ಮಧ್ಯೆ ರಾಜಿ ಆಗುವುದು. ಸಾಧನೆ ಅಂತರ್ ಶಕ್ತಿ ನೀಡಿತ್ತದೆ. ತಾಳ್ಮೆ ಇರಲಿ, ಜಾಣ್ಮೆಯಿಂದ ನಡೆಯಿರಿ. ಮಾನಸಿಕವಾಗಿ ಯಾರು ಕೂಡ ಶೋಷಣೆ ಮಾಡಲಾಗದು ನೀವು ಅನುಮತಿ ನೀಡದ ಹೊರತು. ಆದರೆ, ದೈಹಿಕ ಶೋಷಣೆ ಖಂಡಿತ ಇಲ್ಲಾ. ಒಂದು ಗೆರೆ ಎಳೆಯಿರಿ. ಮುಖ್ಯವಾಗಿ ಮಗು ಸುತ್ತಲು ಇದ್ದಾಗ,ಅದು ತುಂಬಾ ನಕಾರಾತ್ಮಕ ಕಂಪನವನ್ನು ಉತ್ಪತ್ತಿ ಮಾಡುತ್ತದೆ. ಮನೆಯಲ್ಲಿ ಕೆಲ ಮಂತ್ರಗಳನ್ನು ನುಡಿಸಿ, ಮನೆ ಶುದ್ಧವಾಗಿ ಸ್ವಚ್ಛವಾಗಿ ಇಡಿ, ದೀಪ ಹಚ್ಚಿ, ಮಗುವನ್ನು ನಮ್ಮ ಸಂಸ್ಕಾರ ಕೇಂದ್ರಕ್ಕೆ ಸೇರಿಸಿ, ಅತಿ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಯೋಗ, ಪ್ರಾಣಾಯಾಮ, ಧ್ಯಾನ ಕಲಿಸಿ. ಮನೆಗೆಲಸದಲ್ಲಿ ಸಹಾಯ ಮಾಡಲು ಹೇಳಿ ಮತ್ತು ಹಂಚುವುದೇ ಕಾಳಜಿ ಎನ್ನುವ ಮೌಲ್ಯಗಳನ್ನು ಚಿಕ್ಕವಯಸ್ಸಿನಲ್ಲಿ ಬಿತ್ತಬೇಕು.
ಅಪರೂಪಕ್ಕೆ ಸ್ಥಳ ಬದಲಾವಣೆ ಕೂಡ ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯನ್ನು ಯಾರಾದರೂ ಹಿರಿಯ ಸ್ನೇಹಮಯಿ ವ್ಯಕ್ತಿಯೊಂದಿಗೆ ಮಾತನಾಡುವಂತೆ ಮಾಡಿ. ಅವರ ಮೂಲಕ ನೀವು ಜೀವನ ಕ್ರಮ ಬದಲಾಯಿಸಬಹುದಾ ನೋಡಿ. ಕೆಲಸ ವ್ಯಾಪಾರ ಇತ್ಯಾದಿ ಗಳ ಒತ್ತಡದಿಂದ ಆ ರೀತಿ ವರ್ತಿಸುತ್ತಿರಬಹುದು. ಅಪರೂಪಕ್ಕೆ ದಿನಚರಿ ಯಿಂದ ಬಿಡುವು ಮಾಡಿಕೊಳ್ಳಿ. ಗುರುದೇವರಲ್ಲಿ ಪ್ರಾರ್ಥಿಸಿ. ನಮ್ಮ ಶ್ರಮದಿಂದ ಏನು ಸಾಧಿಸಲು ಸಾಧ್ಯವಿಲ್ಲವೋ ಅದನ್ನು ಪ್ರಾರ್ಥನೆಗಳಿಂದ ಸಾಧಿಸಬಹುದು.
Comentários