ಹೌದು, ವ್ಯಕ್ತಿಗತ ಚೈತನ್ಯ ಸಾರ್ವತ್ರಿಕ ಚೈತನ್ಯದಲ್ಲಿ ಲೀನವಾದಾಗ ಸಾಕ್ಷಾತ್ಕಾರ ಮತ್ತು ಅದುವೇ ಸಾಧಕನ ಅಂತಿಮ ಗುರಿಯಾಗಿರಬೇಕು. ಸಾಕ್ಷಾತ್ಕಾರ ಎನ್ನುವುದು ವೀಡಿಯೊ ಗೇಮ್ ಇದ್ದಂತೆ. ಆಟದಲ್ಲಿ ಹೇಗೆ ವಿವಿಧ ಹಂತಗಳಿರುತ್ತವೆ ಪ್ರತಿ ಹಂತದಲ್ಲೂ ಹೀರೊ ಕೆಟ್ಟವರನ್ನು ಹೇಗೆ ಸದೆಬಡಿಯುವನೋ, ಹಾಗೆಯೇ ಸಾಕ್ಷಾತ್ಕಾರ ತಲುಪಿದ ಮೇಲೂ ಕೂಡ ಬೇರೆ ಬೇರೆ ಸ್ಥರದಲ್ಲಿ ಬೇರೆ ಬೇರೆ ಸವಾಲುಗಳು ಬರುವವು. ಹಲವಾರು ಸಿದ್ಧಿಗಳು ಬರುತ್ತವೆ ಆಸೆ ತೋರಿಸಲು ಸಾಧಕನನ್ನು ಪರೀಕ್ಷಿಸಲೆಂದು. ಅದು ಯಾವೆಡೆಯಾದರೂ ಹೋಗುವಂತದ್ದು ಮತ್ತು ಗುರು ನಮಗೆ ತಿಳಿಸುವರು ಯಾವಾಗ ನಿರ್ಗಮಿಸಬೇಕು ಎಂದು. ಪ್ರಯಾಣ/ಗುರಿ ತುಂಬಾ ದೂರ ಆದರೆ ಪ್ರತಿ ಹೆಜ್ಜೆಯಲ್ಲೂ ಕೂಡ ಚಿಕ್ಕ ಪುಟ್ಟ ತಲುಪಬೇಕಾದ ಗುರಿಗಳು ಇರುತ್ತವೆ
Comments