ಮೊದಲು ಜೀವನದ ಉದ್ದೇಶ ಯಾವುದಲ್ಲ ಎನ್ನುವುದನ್ನು ಪಟ್ಟಿ ಮಾಡಿ.
ಕೋಪ ಮಾಡಿಕೊಳ್ಳುವುದು, ಹೊಟ್ಟೆಕಿಚ್ಚು ಪಡುವುದು, ಆಲಸ್ಯ, ಸ್ವತಃ ಮತ್ತು ಬೇರೆಯವರಿಗೆ ತೊಂದರೆ
ಕೊಡುವುದು ಇತ್ಯಾದಿ. ಪಟ್ಟಿ ಮಾಡಿ ' ಯಾವುದು ಅಲ್ಲಾ' ಆಗ 'ಯಾವುದು ಎನ್ನುವುದು ಹುಡುಕುವಿರಿ. ನಾವು 100 ವರ್ಷ ಬದುಕುತ್ತೇವೆ ಅಂದುಕೊಳ್ಳಿ.
ದಿನದಲ್ಲಿ , ನಾವು 8 ರಿಂದ 9 ಗಂಟೆ ಮಲಗುತ್ತೇವೆ. ಅದನ್ನ ವರ್ಷಕ್ಕೆ ಬದಲಾಯಿಸಿದರೆ 25 ರಿಂದ 30 ವರ್ಷ. ಮತ್ತೊಂದು 25 ರಿಂದ 30 ವರ್ಷ 8 ರಿಂದ 5 ರ ಕೆಲಸದಲ್ಲಿ ಕಳೆಯುತ್ತೇವೆ, 5 ರಿಂದ 10 ವರ್ಷ ಊಟದಲ್ಲಿ, 5 ರಿಂದ 10 ವರ್ಷ ಬಾತ್ ರೂಮಿನಲ್ಲಿ, 5 ರಿಂದ 10 ವರ್ಷ ಬೆಡ್ ರೂಮಿನಲ್ಲಿ. ಮತ್ತೊಂದು 10 ವರ್ಷ ಟ್ರಾಫಿಕ್ ನಲ್ಲಿ ನೀವು ಪಟ್ಟಣದಲ್ಲಿ ಇರುವವರು ಆದಲ್ಲಿ. ಇದರರ್ಥ ನಾವು 80 ರಿಂದ 90 ವರ್ಷ ಎಲ್ಲಾ ಪ್ರಾಪಂಚಿಕ ಕಾರ್ಯಗಳನ್ನೇ ಮಾಡುತ್ತಾ ಕಳೆಯುತ್ತೇವೆ. ದಿನದಲ್ಲಿ ನಮಗಾಗಿ ಹೆಚ್ಚು ಎಂದರೆ ಅರ್ಧ ದಿಂದ ಒಂದು ಗಂಟೆ ತೆಗೆದಿಡುತ್ತೇವೆ. ಅದನ್ನು ನೀವು ಹೇಗೆ ಕಳೆದಿದ್ದೀರಾ ಮತ್ತು ಭವಿಷ್ಯದಲ್ಲಿ ಹೇಗೆ ಕಳೆಯಬೇಕೆಂದು ಇಚ್ಚಿಸುವಿರಿ ? ಸಂತೋಷವಾಗಿ, ನಗುವನ್ನು ಹಂಚುತ್ತಾ, ಜ್ಞಾನದಲ್ಲಿ ಇದ್ದು, ಸೇವೆಯಲ್ಲಿ, ಬೇರೆಯವರಿಗೆ ಸಹಾಯ ಮಾಡುತ್ತಾ ಇತ್ಯಾದಿ ಅಥವಾ ಹಿಂದಿನದು ಹೊಟ್ಟೆಕಿಚ್ಚು, ಕೋಪ ಇತ್ಯಾದಿ. ಅದನ್ನು ನೀವೇ ಕಂಡುಕೊಳ್ಳಬೇಕು. ಹೇಳ್ತಾರೆ ಗೊತ್ತಿರುವವರು ನಿಮಗೆ ಹೇಳುವುದಿಲ್ಲ ಮತ್ತು ಯಾರು ನಿಮಗೆ ಹೇಳುವರೊ , ಅವರನ್ನು ನಂಬಬೇಡಿ. ಧ್ಯಾನ ಮಾಡಿ ಮತ್ತು ಆಳವಾಗಿ ಹೋಗಿ. ನಿಮಗೆ ಗೊತ್ತಾಗುತ್ತೆ ಬದುಕು ಆಟವಿದ್ದಂತೆ , ನಿಮ್ಮ ತರ್ಕಕ್ಕೆ ನಿಲುಕುವ ಯಾವುದರಲ್ಲಿಯೂ ಹೆಮ್ಮೆ ಪಡುವಂತಹ ನಿಜವಾದ ಉದ್ದೇಶ ಸಿಗುವುದಿಲ್ಲ.
Comments