ಆಳವಾದ ಧ್ಯಾನವನ್ನು ಹೊಂದಲು,
1. ನಿಮ್ಮ ಆಹಾರ ಪದ್ಧತಿಯನ್ನು ಗಮನಿಸಿ.
2. ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮ ವನ್ನು ಧ್ಯಾನ ಕ್ಕೆ ಮುನ್ನ ಮಾಡಿ.
3. ಆರಂಭದಲ್ಲಿ ಮಾರ್ಗದರ್ಶನವಿರುವ ಧ್ಯಾನ(ಗೈಡೆಡ್ ಮೆಡಿಟೇಷನ್) ಮಾಡಿ ನಂತರ ಸಹಜ ಮಂತ್ರದೊಂದಿಗೆ ಸ್ವತಃ ನೀವೇ ಮಾಡಬಹುದು.
4. ಒಮ್ಮೆ ಮಂತ್ರ ಪಡೆದ ಮೇಲೆ ಚಾತುರ್ಯದಿಂದ ಬಿಡಿ ಮತ್ತು ಏನೂ ಮಾಡಬೇಡಿ. ಬಿಡಲು ಸ್ವಲ್ಪ ಅಭ್ಯಾಸ ಆಗಬೇಕು.
5. ಸುದರ್ಶನ ಕ್ರೀಯೆ ಆಳವಾದ ಧ್ಯಾನ ಸ್ಥಿತಿಗೆ ಹೋಗಲು ಸಹಾಯ ಮಾಡುತ್ತದೆ.
6. ಸೇವೆ - ಸೇವೆ ಅರ್ಹತೆಯನ್ನು ತರುತ್ತದೆ. ಎಷ್ಟು ಸೇವೆ ಮಾಡಿದಷ್ಟು ಅಷ್ಟು ಆಳವಾದ ಧ್ಯಾನ ನಿಮ್ಮದಾಗುವುದು.
7. ಸತು ದೀರ್ಘ ಕಾಲ ನೈರಂತರ್ಯ ಸತ್ಕಾರ ಸೇವಿತೋ ದ್ರುದ್ರ ಭೂಮಿ. ಯಾವುದೇ ಅಭ್ಯಾಸವಿರಲಿ ಗಟ್ಟಿಯಾಗಿ ಊರಲು ಬಹಳ ಕಾಲದವರೆಗೆ ಬಿಡದೆ ಗೌರವ ಭಾವದಿಂದ ಮಾಡಬೇಕಾಗುತ್ತದೆ.
ನೀವು ಎಂತಹ ಸಂಘದಲ್ಲಿ ಇರುವಿರಿ ಅದು ಕೂಡ ಅಧ್ಯಾತ್ಮದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಎಷ್ಟು ಮನಸಿಟ್ಟು (ತೀವ್ರತೆ) ಅಭ್ಯಾಸ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯ ಆಗುತ್ತೆ, ಮಾರ್ಗ ಮತ್ತು ಗುರುವಿನ ಬಗ್ಗೆ ಎಷ್ಟು ಭಕ್ತಿ ಇದೆ ಎನ್ನುವುದು ಕೂಡ ಪರಿಗಣನೆಗೆ ಬರುತ್ತದೆ. ಆಧ್ಯಾತ್ಮಿಕ ದಾರಿ ಇಳಿಜಾರು ಮತ್ತು ಜಾರುವಿಕೆ ಯಿಂದ ಕೂಡಿದೆ. ನೀವು ದಾರಿಯನ್ನು ಬಿಡಬಾರದು. ಈ ಹಾದಿಯಲ್ಲಿ ಪರಿಸ್ಥಿತಿಗಳು ನಮ್ಮನ್ನು ಅಲುಗಾಡಿಸಲು ಬರುತ್ತವೆ , ನಾವು ಎಷ್ಟು ಗಟ್ಟಿಯಾಗಿ ಊರಿದ್ದೇವೆಂದು ಪರೀಕ್ಷಿಸಲು. ನಮ್ಮ ಮನಸ್ಸೇ ಎಷ್ಟೊಂದು ಚಾಲಾಕಿತನ ಮಾಡುತ್ತದೆ. ಗುರಿಯೆಡೆಗಿನ ನಿಮ್ಮ ತೀವ್ರತೆ ಮತ್ತು ಭಕ್ತಿ ತುಂಬಾ ಮುಖ್ಯವಾಗುತ್ತೆ. ಓಂ ನಮಃ ಶಿವಾಯ ಪಠಿಸಿ, ಗುರು ಪೂಜಾ ಮಾಡಿ, ಸೇವೆ ಮಾಡಿ,ಸತ್ಸಂಗದಲ್ಲಿ ಪಾಲ್ಗೊಳ್ಳಿ ಮತ್ತು ಜ್ಞಾನದಲ್ಲಿ ಕೂಡ ಪುನಃ ಪುನಃ. ನೀರಿನಲ್ಲಿ ಚಹಾ ಪುಡಿ ಹಾಕಿದಷ್ಟು ಚಹಾ ಬಲಗೊಳ್ಳುವುದು. ಸೇವಾ, ಸತ್ಸಂಗ ಮತ್ತು ಜ್ಞಾನ ದಲ್ಲಿ ಪದೇ ಪದೇ ಮುಳುಗುತ್ತಲೇ ಇರಬೇಕು. ಸಾಧನೆ ದಿನಂಪ್ರತಿ ಮಾಡಿ.
Comments