ಮನಸ್ಸಿನಲ್ಲಿ ಪ್ರತಿಬಾರಿ ಬರುವ ನಕಾರಾತ್ಮಕ ಯೋಚನೆಗಳನ್ನು ನಿಯಂತ್ರಿಸುವುದು ಹೇಗೆ?
- Divyapaada
- Jun 30, 2020
- 1 min read

ಯೋಚನೆಗಳು ಬರುತ್ತವೆ ಮತ್ತು ನಾವು ಸಕಾರಾತ್ಮಕ ಅಥವಾ ನಕಾರಾತ್ಮಕ ಎಂದು ಅವುಗಳಿಗೆ ಪಟ್ಟಿ ಹಚ್ಚುತ್ತೇವೆ. ನಮ್ಮ ತಾರತಮ್ಯ ನಮಗೆ ಹೇಳುತ್ತದೆ ಯಾವುದು ಮಾಡಬೇಕು ಮತ್ತು ಮಾಡಬಾರದು ಎಂದು. ಬಹಳಷ್ಟು ನಕರಾತ್ಮಕ ಯೋಚನೆಗಳು ಬರುವುದು ನಾವೇ ಮಾಡಿಕೊಂಡ ಪರಿಕಲ್ಪನೆ/ಊಹೆಗಳಿಂದ ಜನ, ಪರಿಸ್ಥಿತಿ ಮತ್ತು ವಸ್ತು ಹೇಗಿರಬೇಕು ಎಂದು. ಯಾವಾಗ ಜನ, ಪರಿಸ್ಥಿತಿ ಮತ್ತು ವಸ್ತು ನಾವು ಮಾಡಿಕೊಂಡ ಊಹೆ/ನಿರೀಕ್ಷೆಗಳಿಗೆ ಹೊಂದಿಕೊಳ್ಳದಿದ್ದರೆ, ಆಗ ನಕಾರಾತ್ಮಕವಾಗಿ ಯೋಚಿಸುತ್ತೇವೆ ಅಲ್ಲವೇ ? ನಾವು ಸತ್ವದ ಮತ್ತು ಹೆಚ್ಚು ಪ್ರಾಣ ಇರುವ ಸ್ಥಿತಿಯಲ್ಲಿ ಇದ್ದಾಗ ಯೋಚನೆಗಳು ನಮ್ಮನ್ನು ಕಾಡಿಸುವುದಿಲ್ಲ. ನಿಮ್ಮ ದೈಹಿಕ ಚಟುವಟಿಕೆ ಹೆಚ್ಚಿಸಿಕೊಳ್ಳಿ, ನಿಮ್ಮ ವಿಟಾಮಿನ್ ಡಿ ಎಷ್ಟಿದೆ ಎಂದು ನೋಡಿ. ನಕಾರಾತ್ಮಕ ಯೋಚನೆಗಳು ಮತ್ತು ಕಂಪನಗಳು ಸೂರ್ಯನ ಕಿರಣಗಳ ಕೊರತೆಯಿಂದಾಗಿ ಇರಬಹುದು. ನಿಮ್ಮ ರಕ್ತ ಪರಿಚಲನೆ ಮತ್ತು ಜೀರ್ಣಕ್ರೀಯೆ ಸರಿಯಿಲ್ಲದಿದ್ದರೆ ಕೂಡ ನಕಾರಾತ್ಮಕ ಯೋಚನೆಗಳು ಬರುತ್ತವೆ. ನಕಾರಾತ್ಮಕ ಯೋಚನೆ ಬಂದಾಗ ಸುಮ್ಮನೆ ಸ್ವೀಕರಿಸಿ. ಅದರೊಂದಿಗೆ ಗುದ್ದಾಡಲು ಹೋಗಬೇಡಿ, ಆದರೆ ಯಾವಾಗ ನಿಮಗೆ ಅರಿವಾಗುವುದೋ ನಿಮ್ಮ ಮನಸ್ಸಿನದೇ ಎಂದು, ನೀವು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲಾ. ನಿಮಗೆ ನಕಾರಾತ್ಮಕದೊಂದಿಗೆ ಗುದ್ದಾಡಲು ( ಇದು ನೆರಲಿನೊಂದಿಗೆ ಗುದ್ದಾಡಿದಂತೆ) ಮತ್ತು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನ ಪಡಬೇಕಾಗಿಲ್ಲ, ಏಕೆಂದರೆ ಹೇಗೂ ಒಳ್ಳೆಯ ಗುಣಗಳು ನಮ್ಮಲ್ಲಿ ಇವೆ. ನಾವು ಬೆಳಕಿನೆಡೆಗೆ ತಿರುಗಬೇಕು ಅಷ್ಟೇ, ನೆರಳು ತಾನಾಗಿಯೇ ಮಾಯವಾಗುತ್ತದೆ.
Comentarios