ಒಂದು ಮುಹೂರ್ತ ಸುಮಾರು 48 ನಿಮಿಷಗಳ ವರೆಗೆ ಇರುತ್ತದೆ. ಎರಡು ಮುಹೂರ್ತ ಸೂರ್ಯೋದಯದ ಮುಂಚೆ (ಸುಮಾರು ಒಂದು ವರೆ ಗಂಟೆ) ಅದನ್ನು ಬ್ರಾಹ್ಮಿ ಮುಹೂರ್ತ ಎನ್ನುವರು. ದಿನವಿನ್ನೂ ಆರಂಭ ವಾಗಲಿರುತ್ತದೆ ಮತ್ತು ಪ್ರಕೃತಿ ಪ್ರಶಾಂತವಾಗಿ, ಪ್ರಸನ್ನ ಮತ್ತು ಮೌನವಾಗಿ ಇರುತ್ತೆ. ಎಲ್ಲವೂ ಶೂನ್ಯವಾಗಿರುತ್ತದೆ, ಖಾಲಿಯಾಗಿರುತ್ತದೆ. ಪ್ರಕೃತಿಯ ಸತ್ವ ಮತ್ತು ಪ್ರಾಣದ ಸ್ಥರ ಜಾಸ್ತಿ ಇರುತ್ತದೆ. ಈ ಸಮಯದಲ್ಲಿ ಎದ್ದು ಯೋಗ, ಧ್ಯಾನ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದೆಂದು ಹೇಳಲಾಗುತ್ತದೆ. ಆರೋಗ್ಯ ಮತ್ತು ಚೈತನ್ಯ ಕ್ಕೆ ಒಳ್ಳೆಯದು. ಸುಲಭವಾಗಿ ಮತ್ತು ಶ್ರಮವಿಲ್ಲದೆ ಧ್ಯಾನಕ್ಕೆ ಜಾರಬಹುದು. ಇದು ಬ್ರಹ್ಮ ನ - (ಸೃಷ್ಟಿಕರ್ತ) ನ ಮುಹೂರ್ತ. ನಿಮ್ಮ ಸೃಜನಶೀಲತೆ ಹೆಚ್ಚು ಇರುತ್ತದೆ ಜೊತೆಗೆ ನಿಮ್ಮ ಸ್ವಂತದ ರಚನಾಕಾರರು ಕೂಡ ನೀವಾಗಬಹುದು. ಇದರರ್ಥ ನೀವು ಈ ಸಮಯದಲ್ಲಿ ಸಾಧನೆ ಮಾಡಿದರೆ ನೀವು ದಿನ ನಿತ್ಯದ ಜೀವನದಲ್ಲಿ ಮಾಡುವ ಎಲ್ಲಾ ಕಾರ್ಯಗಳಲ್ಲಿ ನಿಮ್ಮ ಇಚ್ಛಾಶಕ್ತಿ ಹೆಚ್ಚುವುದು.
Kommentare