ಬೆರೆಯವರೊಂದಿಗೆ ಹೋಲಿಸಿಕೊಳ್ಳುವುದು ದುಃಖದ ಮೂಲ ಕಾರಣಗಳಲ್ಲಿ ಒಂದು. ಜೀವನದ ಬಗ್ಗೆ ವಿಶಾಲ ದೃಷ್ಟಿಕೋನ ಇಲ್ಲದೇ ಹೋದಾಗ ಅಭದ್ರತೆ ಮತ್ತು ಅಸೂಯೆ ನಿಮ್ಮನ್ನು ಆಳುತ್ತದೆ. ನೀವು ಆಟ ಆಡುವಾಗ ಪ್ರತಿ ಬಾರಿ ಗೆಲ್ಲಲು ಸಾಧ್ಯವೇ ? ಸರಿ ಒಂದು ಎರಡು ಬಾರಿ ಯಾರ ವಿರುದ್ದವೋ ಗೆಲ್ಲುವಿರಿ. ನಿಮಗೆ ಹೆಸರು ಮತ್ತು ಪ್ರಸಿದ್ಧಿ ಸಿಗುತ್ತದೆ. ಆದರೆ, ನಿಮಗಿಂತ ಉತ್ತಮ ಇರುವವರು ಯಾರಾದರೊಬ್ಬರು ಇದ್ದೇ ಇರುತ್ತಾರೆ. ಅಲ್ವಾ ? ಪ್ರತಿ ಬಾರಿ ಗೆಲ್ಲಲು ಆಗುವುದೇ ? ಅದಕ್ಕೆ ಗುರುದೇವರು ಹೇಳುತ್ತಾರೆ, ಕೆಲವೊಮ್ಮೆ ನೀವು ಗೆಲ್ಲುತ್ತೀರಾ ಮತ್ತು ಕೆಲವೊಮ್ಮೆ ನೀವು ಬೇರೆಯವರನ್ನು ಗೆಲ್ಲಿಸುತ್ತೀರಾ. ನೀವು ಗೆಲ್ಲಲಿಲ್ಲ ಎಂದ ಮಾತ್ರಕ್ಕೆ ನೀವು ವಿಫಲರೆಂದಲ್ಲ. ನೀವು ಗೆದ್ದ ಮಾತ್ರಕ್ಕೆ ಪರಿಪೂರ್ಣ ರೆಂದಲ್ಲ. ಯಾರೂ ಪರಿಪೂರ್ಣರಲ್ಲ. ನಿಮಗೆ ನೀವೇ ಹೋಲಿಸಿಕೊಳ್ಳಿ ಕಳೆದ ತಿಂಗಳು ಅಥವಾ ಕಳೆದ ವರ್ಷ ಹೇಗೆ ಮಾಡಿದಿರಿ ಎಂದು , ನಂತರ ಅದನ್ನು ಸುಧಾರಿಸಲು ನೋಡಿ. ಇದೆಲ್ಲಾ ಆತಂಕ, ಅಭದ್ರತೆ, ಅಸೂಯೆ ಇತ್ಯಾದಿ ಆಗುವುದನ್ನು ತಡೆಯುತ್ತದೆ.
ಸಂತಸದ ಶಿಬಿರ ಮಾಡಲು ಕರೆದುಕೊಂಡು ಬನ್ನಿ. ನಾವು ಯಾವಾಗ ಜೀವನವನ್ನು ನಮ್ಮ ಮತ್ತು ನಮ್ಮ ಮಕ್ಕಳ ಮಿತಿಯಲ್ಲಿ ನೋಡುತ್ತೇವೆಯೋ ಆಗ ಬಹಳಷ್ಟು ಒತ್ತಡವನ್ನು ನಮ್ಮ ಮೇಲೆ ಮತ್ತು ನಮ್ಮ ಮಕ್ಕಳ ಮೇಲೆ ಹೇರುತ್ತೇವೆ. ಆರಾಮವಾಗಿರಿ ಮತ್ತು ಬಿಟ್ಟು ಬಿಡಿ. ಪ್ರತಿಯೊಂದು ವೈಫಲ್ಯ ಅಮೂಲ್ಯ ಪಾಠವನ್ನು ಹೇಳಿಕೊಡುತ್ತದೆ. ನಾವು ಗೆಲ್ಲುತ್ತಲೇ ಇದ್ದರೆ, ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ. ನಿಜವಾಗಿ ನೋಡಿದರೆ ಕಲಿಯಲು ಅಂತ್ಯವಿಲ್ಲ. ತೆರೆದ ಮನಸ್ಸನ್ನು ಹೊಂದಿರಿ.
ಬೆಳಿಗ್ಗೆ ಯೋಗ, ಪ್ರಾರ್ಥನೆ, ವ್ಯಾಯಾಮದಿಂದ ಆರಂಭಿಸಿ. ಉತ್ತಮ ಆಹಾರ ಸೇವಿಸಿ. ಕೆಲವೊಮ್ಮೆ ಹೊರಗಿನ ಆಹಾರ (ಜಂಕ್) ಪರ್ವಾಗಿಲ್ಲ. ಜೀವನದಲ್ಲಿ ಓದುವುದೊಂದೆ ಅಲ್ಲಾ. ಪಠ್ಯೇತರ ಚಟುವಟಿಕೆಗಳಾದಂತಹ ಚಿತ್ರಕಲೆ, ಹಾಡು, ಸಂಗೀತ, ನೃತ್ಯ, ಆಟ ಇತ್ಯಾದಿ ಗಳಲ್ಲಿ ಕೂಡ ಪಾಲ್ಗೊಳ್ಳಬೇಕು. ಆಟ ವಯಕ್ತಿಕ ಜೀವನದಲ್ಲಿ ವ್ಯಕ್ತಿತ್ವ ನಿರ್ಮಿಸುತ್ತದೆ. ನನ್ನ ಅನುಭವದಲ್ಲಿ ಯಾರು ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲವೋ ಅವರು ತಮ್ಮ ಮತ್ತು ಇತರರ ಜೀವನವನ್ನು ನರಕ ಮಾಡಿಬಿಡುತ್ತಾರೆ. ಕ್ರೀಯಾತ್ಮಕವಾಗಿ ಇರಿ. ಗುರಿಯನ್ನು ಹೊಂದಿ ಅದನ್ನು ಸಾಧಿಸಲು ಶ್ರಮವಹಿಸಿ. ಆದರೆ ಒತ್ತಡವನ್ನು ತರಿಸಿಕೊಳ್ಳಬೇಡಿ. ನೀವು 100% ಪ್ರಯತ್ನ ಪಡಿ ಮತ್ತು ಆ ಗುರಿ ಸಾಧಿಸಲು ಆಗದಿದ್ದರೆ ಎದೆಗುಂಡಬೇಡಿ. ಕಲಿಯಿರಿ, ಯಾವಾಗಲೂ ಮತ್ತೊಂದು ಅವಕಾಶ ಇರುತ್ತದೆ. ಸುಧಾರಣೆ ತಂದು ಕೊಳ್ಳಿ. ಕಲಿಯುವುದನ್ನು ನಿಲ್ಲಿಸಬೇಡಿ. ಎಲ್ಲಕ್ಕಿಂತ ಮುಖ್ಯ ನಗ್ತಾ ಇರಿ ಮತ್ತು ತುಂಟರಾಗಿರಿ. ಈ ಸಮಯ ಜೀವನವನ್ನು ಆನಂದಿಸುವುದಾಗಿದೆ.
Comments