ಉತ್ತರ : ಸತ್ವ ಎಂದರೆ ಶುದ್ಧತೆ. ಯೋಚನೆ, ಮಾತು ಮತ್ತು ಕಾರ್ಯದಲ್ಲಿ ಶುದ್ಧತೆ. ಗುರುದೇವರು ಹೇಳುತ್ತಾರೆ ಪೂಜೆಯ ಅತ್ತ್ಯುತ್ತಮ ವಿಧಾನವೆಂದರೆ ಸಂತೋಷದಿಂದ ಇರುವುದು. ಸಂತೋಷವನ್ನು ಹರಡಿ. ಜನರ ಮನಸ್ಥಿತಿಯನ್ನು ಬೆಳಗಿಸಿ. ಸಕಾರಾತ್ಮಕತೆಯನ್ನು ಹರಡಿ. ಒಳ್ಳೆ ಕೇಳುಗರಾಗಿ, ಜನರ ಮಾತು ಕೇಳಿ ಮತ್ತು ಹುರಿದುಂಬಿಸಿ.
ಹಗುರವಾದ ಸಂಗೀತ ಮತ್ತು ಹಾಡುಗಳನ್ನು ಕೇಳಿ. ನಿಮ್ಮ ಮತ್ತು ಇತರರ ಮನಸ್ಸನ್ನು ಶಾಂತಗೊಳಿಸಲು ಏನು ಆಗುವುದೋ ಮಾಡಿ. ಗುರುದೇವರು ಇದನ್ನೂ ಕೂಡ ಹೇಳಿದ್ದಾರೆ 'ಎಲ್ಲವೂ ಸರಿಯಾಗಿ ನಡೆಯುವಾಗ ಯಾವ ಮೂರ್ಖನಾದರೂ ನಗುವನು. ಆದರೆ, ನಾವು ಅಂದುಕೊಂಡಂತೆ ಪರಿಸ್ಥಿತಿಗಳು ಇಲ್ಲದೇ ಹೋದಾಗ , ನಾವು ನಗುವನ್ನು ಹೊಂದುವುದಾದರೆ, ಆಗ ನಾವು ಜೀವನ ಕಲೆಯಲ್ಲಿ ಇದ್ದೇವೆ ' 🙂
Комментарии