top of page
Divyapaada

ಪ್ರಶ್ನೆ : ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ, ಆದರೆ ಕೆಲವೊಮ್ಮೆ ಮಾಡುತ್ತೇನೆ ಮತ್ತು ತುಂಬಾ ಕೆಟ್ಟದಾಗಿ

ಅನಿಸುತ್ತಿದೆ. ಇದನ್ನು ಹೇಗೆ ತಪ್ಪಿಸಲಿ ?




ಉತ್ತರ : ಬೆರೆಯವರೊಂದಿಗೆ ಹೋಲಿಸಿಕೊಳ್ಳುವುದು ದುಃಖದ ಮೂಲ ಕಾರಣಗಳಲ್ಲಿ ಒಂದು. ನಾವು ಅರ್ಥ ಮಾಡಿಕೊಳ್ಳಬೇಕು ನಾವೆಲ್ಲರೂ ವಿಭಿನ್ನ. ಪ್ರಪಂಚದಲ್ಲಿ ಒಂದೇ ರೀತಿಯಾಗಿರುವ ಇಬ್ಬರು ಇಲ್ಲಾ

ಐದು ಬೆರಳುಗಳು ವಿಭಿನ್ನವಾಗಿರುವಂತೆ. ಅವು ಒಂದೇ ರೀತಿಯಾಗಿದ್ದರೆ ನಮ್ಮ ಕೈಯಿಂದ ಯಾವ ಕೆಲಸವೂ ಆಗುತ್ತಿರಲಿಲ್ಲ. ನಿಮಗೆ ಅನಿಸಿರುವ ಹಾಗೆ ನಿಮಗಿಂತ ಮೇಲಿರುವವರೊಡನೆ ಹೋಲಿಸಿಕೊಂಡರೆ , ನಿಮಗೆ ಕೀಳರಿಮೆ ಬರುತ್ತದೆ. ಮತ್ತು ನೀವು ನಿಮಗಿಂತ ಕೆಳಗಿರುವವರೊಡನೆ ಹೋಲಿಸಿಕೊಂಡರೆ ಶ್ರೇಷ್ಠ ಭಾವ ಬರುತ್ತದೆ. ನಿಮ್ಮ ಹಾಗೆಯೇ ಇರುವ ತದ್ರೂಪಿ ಸಿಕ್ಕರೆ ನಿಮ್ಮ ಹಾಗೆ ಕೆಲಸ ಮಾಡುವ, ಮಾತನಾಡುವ, ನಡೆಯುವ - ನಾ ಹೇಳುವೆ , ನೀವು 5 ನಿಮಿಷ ಕೂಡ ಆ ವ್ಯಕ್ತಿಯನ್ನು ತಡೆದುಕೊಳ್ಳುವುದಿಲ್ಲ.

ಹೋಲಿಸಿಕೊಳ್ಳಲು ಕೊನೆಯೇ ಇಲ್ಲಾ - ವೃತ್ತಿ ಜೀವನದಲ್ಲಿ ಇರಲಿ ಅಥವಾ ವಯಕ್ತಿಕ ಜೀವನದಲ್ಲಿ. ಭೂಮಿ ಮೇಲೆ 7.5 ಬಿಲಿಯನ್ ಜನರು ಇದ್ದಾರೆ. ಎಲ್ಲರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಲು ಸಾಧ್ಯವೇ ? ನೀವು ಕೊನೆಗೆ ಹುಚ್ಚಾಸ್ಪತ್ರೆ ಸೇರುವಿರಿ. ನಿಮ್ಮ ಪ್ರಪಂಚ ಚಿಕ್ಕದಿದೆ - ನೀವು ಮತ್ತು ನೀವು ಹೋಲಿಸಿಕೊಳ್ಳುತ್ತಿರುವ ವ್ಯಕ್ತಿ. ಹೇಳಬೇಕು ಎಂದರೆ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗಿಂತ ಆ ವ್ಯಕ್ತಿಯ ಬಗ್ಗೆ ಹೆಚ್ಚು ಯೋಚಿಸುತ್ತಿದ್ದೀರಾ ! ಎಷ್ಟು ಬುದ್ಧಿವಂತಿಕೆ ಇದು ?

ನಿಮ್ಮ ಮೇಲಿನ ಕೋಣೆಯನ್ನು ಬಾಡಿಗೆಗೆ ಕೊಟ್ಟು ಬಿಟ್ಟಿದ್ದೀರಾ ನಿರಂತರವಾಗಿ ಆ ವ್ಯಕ್ತಿಯ ಬಗ್ಗೆ ಯೋಚಿಸುತ್ತಾ.

ಅದರಿಂದ ಹೊರಬರುವುದು ಹೇಗೆ ? ಜೀವನದ ಬಗ್ಗೆ ವಿಶಾಲ ದೃಷ್ಟಿಕೋನವಿರಲಿ. ನಿಮ್ಮ ಅರಿವನ್ನು ಹಿರಿದಾಗಿಸಿಕೊಳ್ಳಿ. ಜೀವನವನ್ನು ಆಟದಂತೆ ನೋಡಿ. ನೀವು ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ. ಕೆಲವೊಮ್ಮೆ ನೀವು ಗೆಲ್ಲುವಿರಿ ಮತ್ತು ಕೆಲವೊಮ್ಮೆ ಬೇರೆಯವರನ್ನು ಗೆಲ್ಲಿಸುವಿರಿ. ಎರಡರಲ್ಲೂ ಕೂಡ ನೀವೇ ಗೆದ್ದವರು. ಕ್ರೀಡೆಗಳು ವ್ಯಕ್ತಿಯ ಜೀವನದಲ್ಲಿ ಉತ್ತಮ ಚಾರಿತ್ರ್ಯವನ್ನು ರೂಪಿಸುತ್ತದೆ. ಸೋಲು ಮತ್ತು ಗೆಲುವು ಆಟಗಳನ್ನು ಇನ್ನೂ ಮೆಚ್ಚುವಂತೆ ಮಾಡುತ್ತದೆ. ಯಾವಾಗಲೂ ಕಲಿಯುವುದು ಇರುತ್ತದೆ. ನೀವು ಯಾವಾಗಲೂ ಗೆದ್ದಾಗ, ನೀವು ಕಲಿಯುವುದನ್ನು ನಿಲ್ಲಿಸುವಿರಿ ಮತ್ತು ಆಗಲೇ ನೀವು ಸೋಲುವುದು.

4 ರೀತಿಯ ಜನರು ಇದ್ದಾರೆ. ಸಂತೋಷವಾಗಿರುವ ಜನರೊಂದಿಗೆ ಸ್ನೇಹ ಮಾಡಿದರೆ ನೀವೂ ಸಂತೋಷವಾಗಿ ಇರುತ್ತೀರಾ.

ದುಃಖದಲ್ಲಿ ಇರುವವರೊಂದಿಗೆ, ನೀವು ಕರುಣೆ ತೋರಿಸಿ.

ಒಳ್ಳೆ ಕೆಲಸ ಮಾಡುವ ಜನರೊಂದಿಗೆ, ನೀವು ಮೆಚ್ಚಿ ಮತ್ತು ಅವರಿಗಾಗಿ ಸಂತೋಷ ಪಡಿ, ಇಲ್ಲವಾದರೆ ಹೊಟ್ಟೆಕಿಚ್ಚು ಬರುತ್ತದೆ - ನಿಮ್ಮ ಪ್ರಶ್ನೆಗೆ ಸಂಬಂಧಿತ.

ಕೆಟ್ಟ ಕೆಲಸ ಮಾಡುವ ಜನರೊಂದಿಗೆ - ತಿಳಿಸಿ ಮತ್ತು ಅಲಕ್ಷಿಸಿ.

ಈ ಜಗತ್ತಿನಲ್ಲಿ ಸಾಧಿಸುವಂತದ್ದು ಏನು ಇಲ್ಲಾ. ಆರಾಮವಾಗಿರಿ. 6ಅಡಿ ಭೂಮಿಯಲ್ಲಿ ನಾವೆಲ್ಲಾ ಹೋಗುವವರಿದ್ದೇವೆ. ನೀವು ಮತ್ತು ನೀವು ಹೋಲಿಸಿಕೊಳ್ಳುತ್ತಿರುವ ವ್ಯಕ್ತಿ .ದಾರಿಯಲ್ಲಿ ನಿಮ್ಮ ಕಾರ್ ಟೈಯರ್ ಪಂಕ್ಚರ್ ಆಗಿ ನಿಂತಿದ್ದರೆ, ನೀವು ಹೊತ್ತರಕಿಚ್ಚು ಪಡುತ್ತಿರುವ / ಹೋಲಿಸಿಕೊಳ್ಳುತ್ತಿರುವ ವ್ಯಕ್ತಿ ನಿಮ್ಮನ್ನು ಕಾಪಾಡಲು ಬಂದರೆ ಏನು ಮಾಡುವಿರಿ ? ಆಗುವ ಸಾಧ್ಯತೆ ಇದೆ ಅಲ್ಲವೇ . ಆರಾಮವಾಗಿರಿ, ನಿಮ್ಮ ಪ್ರೀತಿ ಪಾತ್ರರಿಗೆ ಇನ್ನು ಮುಂದೆ ಆ ವ್ಯಕ್ತಿಯ ಬಗ್ಗೆ ಯೋಚಿಸುವುದಿಲ್ಲವೆಂದು ಮಾತು ಕೊಡಿ. ಬಿಟ್ಟು ಬಿಡಿ. " ಹೋಗಲು ಬಿಡುವುದು" ಜೀವನದ ಮಕರಂದ.

1 view0 comments

Comments


Post: Blog2_Post
bottom of page