ಹೇಳಿದ್ದಾರಲ್ಲಾ ಅದು ಏನು ಮುಖ್ಯವಾಗಿ ಕಾರ್ತಿಕ ಪುರಾಣ, ಲಕ್ಷಗಟ್ಟಲೆ ಜನ ಧಾರ್ಮಿಕವಾಗಿ ಆಚರಿಸುತ್ತಾರಲ್ಲಾ - ಏನಾದರೂ ಲಾಭವಿದೆಯೇ? ನಮ್ಮ ಸ್ವಂತ ಲಾಭದ ಉದ್ದೇಶವಿದ್ದರೂ ನಾವೇನಾದರೂ ಪುಣ್ಯ/ಒಳ್ಳೆಯ ಕರ್ಮಗಳನ್ನು ಗಳಿಸುತ್ತೇವೆಯೇ ಇದನ್ನೆಲ್ಲಾ ಮಾಡಿ ? ಪ್ರಾರ್ಥನೆ/ಪದ್ಧತಿ ಗಳನ್ನು ಸಂಕಲ್ಪ ದೊಂದಿಗೆ ಮಾಡಿದಾಗ - ಯಾವ ರೀತಿಯ ಕರ್ಮ ಶೇಖರಿಸುತ್ತೇವೆ? ಯಾವ ಆಸೆಯೂ ಇಲ್ಲದೆ, ಕೃತಜ್ಞತೆಯಿಂದ ಮಾಡಿದಾಗ, ಆಗ ಅದು ನಿಜವಾದ ಪ್ರಾರ್ಥನೆ ಮತ್ತು ನಾವು ದೇವರ ಸಮೀಪ ಹೋಗಲು ಸಾಧ್ಯವಾಗುತ್ತದೆ.
ಉತ್ತರ : ಉಪವಾಸ ನಮ್ಮದೇ ದೇಹವನ್ನು ಶುದ್ಧಿಮಾಡಲು ಇರುವುದು. ಉಪವಾಸ ಎಂದಿಗೂ ದೇವರನ್ನು ಸಂತೋಷಗೊಳಿಸಲು ಅಲ್ಲಾ. ನೀವು ಉಪವಾಸ ಮಾಡಿದರೆ ದೇವರಿಗೆ ಏನು ಸಿಗುತ್ತದೆ 😊 ನೀವು ಗಮನಿಸಿದ್ದೀರಾ ನಾವು ಹೊಟ್ಟೆ ತುಂಬಿದಾಗ ಯಾವುದೇ ಪೂಜೆ ಅಥವಾ ಹವನಗಳನ್ನು ಮಾಡಿದಾಗ, ಮನಸ್ಸು ಒಂದೆಡೆ ಇರುವುದೇ ಇಲ್ಲಾ, ಸ್ವಲ್ಪ ನಿದ್ದೆ ಬಂದ ಹಾಗೆ ಕೂಡ ಆಗುತ್ತೆ. ಸರಿಯಾದ ಸಂಕಲ್ಪ ತೆಗೆದುಕೊಳ್ಳಲು ಕೂಡ ನಮಗೆ ಗೊತ್ತಾಗುವುದಿಲ್ಲ, ಏಕೆಂದರೆ ಹೊಟ್ಟೆ ತುಂಬಿದಾಗ ನಮ್ಮ ಬುದ್ದಿ ಕೆಲಸ ಮಾಡುವುದಿಲ್ಲ. ಬೇಡದ ಆಹಾರ ಸೇವಿಸಿ ತುಂಬಿದಾಗಂತರೂ ಇನ್ನೂ ಅವ್ಯವಸ್ಥೆ ಆಗುತ್ತದೆ. ಹೀಗಾಗಿ , ನಾವು ಶಾಂತ ಮನಸ್ಸು ಮತ್ತು ಖಾಲಿ ಹೊಟ್ಟೆಯಲ್ಲಿ ಸಂಕಲ್ಪ ತೆಗೆದುಕೊಂಡಾಗ 😊 ಹೆಚ್ಚಾಗಿ ಫಲ ಕೊಡುತ್ತದೆ. ಯಾಕೆ ? ನಾವು ತೆಗೆದುಕೊಂಡ ಸಂಕಲ್ಪ ನಮಗೆ ಮತ್ತು ಸುತ್ತಲಿನ ಜನರಿಗೂ ಲಾಭದಾಯಕ ಆಗಿರುತ್ತದೆ. ಆ ರೀತಿಯ ಸಂಕಲ್ಪಗಳು ಸುಲಭವಾಗಿ ಅಭಿವ್ಯಕ್ತಗೊಳ್ಳುತ್ತವೆ. ಪ್ರಕೃತಿಗೆ ಬುದ್ಧಿವಂತಿಕೆ ಇದೆ, ಅದು ಸುಲಭವಾಗಿ ನಮ್ಮೆಲ್ಲರ ಸಂಕಲ್ಪಗಳನ್ನು ನೆರವೇರಿಸುವುದಿಲ್ಲ, ಏಕೆಂದರೆ ಪ್ರಕೃತಿಗೆ ಗೊತ್ತಿದೆ ನಮಗೇನು ಒಳ್ಳೆಯದೆಂದು. ನೀರಿಗೆ ಕಂಪನಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ. ನೀರಿನ ದಡದಲ್ಲಿ , ಅನಾದಿ ಕಾಲದಿಂದಲೂ ತುಂಬಾ ಋಷಿಗಳು ಧ್ಯಾನವನ್ನು ಪ್ರಾರ್ಥನೆಯನ್ನು ಮಾಡಿರಬಹುದು ಮತ್ತು ನದಿಗಳು ಗಿಡಮೂಲಿಕೆಗಳನ್ನು ಕೂಡ ಸಾಗಿಸುತ್ತವೆ ಹಾಗೆಯೇ ಹರಿಯುವಾಗ ಅದರೊಳಗಡೆಯ ಗುಣಪಡಿಸುವ ಔಷಧಿಯನ್ನು ಕೂಡ. ಹೀಗಾಗಿ ಪವಿತ್ರ ನೀರಲ್ಲಿ ಮುಳುಗುವುದು ಪುನಃ ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧ ಗೊಳಿಸಲು.
Comments