ಮಕ್ಕಳು ಮತ್ತು ಪಾಲಕರಮಧ್ಯೆ ಅಥವಾ ಯಾರ ಜೊತೆಯಾದರು. ಹೇಗೆ ಪರಿಹರಿಸುವುದು ಮತ್ತು ತಾಳ್ಮೆಯಿಂದ ಹೇಗೆ ಇರುವುದು ?
ಉತ್ತರ: ಸ್ವಲ್ಪ ವಿರಸಗಳು ಪರವಾಗಿಲ್ಲ. ಇದು ನಿಮಗೆ ಕುಟುಂಬದಲ್ಲಿ ಶಾಂತಿಯ ಮಹತ್ಮವನ್ನು ತೋರಿಸುತ್ತದೆ. ಸಣ್ಣ ವಿರಸಗಳು ಇರುವುದು ಕುಟುಂಬಕ್ಕೆ ಯಾರನ್ನೂ ಅಲ್ಲಗಳೆಯಬೇಡಿ ( ಆಂಗ್ಲ ಪದ - ಗ್ರ್ಯಾಂಟೆಡ್) ಎಂದು ಅರಿವು ಮೂಡಿಸಲು. ವಿರಸಗಳು ಆಗುವುದು ಮುಖ್ಯವಾಗಿ ಮಕ್ಕಳೆಡೆಗೆ ಪಾಲಕರ ನಿರೀಕ್ಷೆ ಮತ್ತು ಪಾಲಕರೆಡೆಗೆ ಮಕ್ಕಳ ನಿರೀಕ್ಷೆಯಲ್ಲಿ ಇರುವ ವ್ಯತ್ಯಾಸದಿಂದಾಗಿ - ಪೀಳಿಗೆಯ ಅಂತರ. ಪರಿಹರಿಸಲು ಅತ್ತ್ಯುತ್ತಮ ವಿಧಾನವೆಂದರೆ ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸುವುದು. ಸ್ವಲ್ಪ ಸಮಯ ನೀಡಿ ಮತ್ತು ಪರಿಸ್ಥಿತಿ ಸರಿ ಹೋಗುತ್ತದೆ. ನೀವು ಸಾಧಕರಾದಲ್ಲಿ, ನಿಮ್ಮ ಪಾಲಕರನ್ನು ನಿಮ್ಮ ಮಾತುಗಳಿಂದ ಒಪ್ಪಿಸಲು ಹೋಗಬೇಡಿ. ನೀವು ಮುಗುಳ್ನಗಲು ಸಾಧ್ಯವಾದರೆ, ಭಿನ್ನಾಭಿಪ್ರಾಯಗಳಿದ್ದರೂ ಸಹ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಆಗ, ಯಾವುದಾದರೂ ಒಂದು ಸಂದರ್ಭದಲ್ಲಿ ನಿಮ್ಮೆಡೆಗೆ ತಿರುಗುವರು. ಇದು ಒಂದು ಪ್ರೀತಿ ಮತ್ತು ಗೌರವ ದ ನಡುವಿನ ಸೂಕ್ಷ್ಮ ಸಮತೋಲನ. ಅತಿಯಾದ ಗೌರವ ಸಂಬಂಧದಲ್ಲಿ ಅಂತರದ ಭಾವ ತರಿಸುತ್ತದೆ. ಅತಿಯಾದ ಪ್ರೀತಿ ನಿಮಗೆ ವಸ್ತುಗಳನ್ನು ಅಲ್ಲಗಳೆಯುವಂತೆ ಮಾಡುತ್ತದೆ. ಹೀಗಾಗಿ ಸರಿಯಾದುದೆಂದರೆ ಪ್ರೀತಿ ಮತ್ತು ಗೌರವ ದ ಮಿಶ್ರಣ.
ಪಾಲಕರಿಗೆ ಮಕ್ಕಳ ಒಳಿತು ಬೇಕು, ಮಕ್ಕಳಿಗೆ ಪಾಲಕರ ಒಳಿತು ಬೇಕು ಆದರೆ ಇಬ್ಬರ ದೃಷ್ಟಿಕೋನ ಬೇರೆ. ಪರಸ್ಪರ ದೂರುವ ಬದಲಿಗೆ ಸರತಿ(ಪಾಳಿ) ತೆಗೆದುಕೊಳ್ಳಿ. ಕೆಲವೊಮ್ಮೆ ನಿಮ್ಮ ಅಂಶಗಳನ್ನು ತಾಳ್ಮೆಯಿಂದ ತಿಳಿಸಿ ಮತ್ತು ಕೆಲವೊಮ್ಮೆ ಮೌನದಿಂದ ಇರಿ ನಿಮ್ಮ ಪಾಲಕರು ತಮ್ಮ ಅಂಶಗಳನ್ನು ಹೇಳಲಿ. ಯಾವುದೇ ಸಂಬಂಧ ರಾಜಿಯದಾಗಿದೆ. ಸೂಕ್ತ ಪರಿಸ್ಥಿತಿಯೆಂದರೆ ಕುಟುಂಬದ ಎಲ್ಲಾ ಸದಸ್ಯರು ಧ್ಯಾನವನ್ನು ಮಾಡುವವರಾಗಿರುವುದು. ಯಾರು ಮಾಡ್ತಾರೋ ಅವರು ತಾಳ್ಮೆಯನ್ನು ಇಟ್ಟುಕೊಳ್ಳಬೇಕು ಮತ್ತು ವಿರಸಗಳಿಂದ ಮೇಲೆ ಏಳಲು ಎಲ್ಲಾ ನೈಪುಣ್ಯತೆ ಯನ್ನು ಉಪಯೋಗಿಸಬೇಕು.
Comments