1. ನಾವು ಈಗಿನ ಜನ್ಮದಲ್ಲಿ ಪ್ರಾರಬ್ದ ಕರ್ಮ ( ಸಂಚಿತ ಕರ್ಮದ ಅನುಗುಣವಾಗಿ ನಾವು ಈ ಜನ್ಮದಲ್ಲಿ ಅಭಿವ್ಯಕ್ತ ಪಡಿಸುವ ಯೋಚನೆ ಮತ್ತು ಕಾರ್ಯ) ಕ್ಕೆ ಪ್ರತಿಕ್ರೀಯೆಯಾಗಿ ಸ್ವ ಇಚ್ಛೆಯಿಂದ ಮಾಡುತ್ತೇವೆ.
2. ನಾವು ಸ್ವ ಇಚ್ಛೆಯನ್ನು ಅಗ್ನಿ ಕರ್ಮ ಸೃಷ್ಟಿಸಲು ಮಾಡುತ್ತೇವೆ.
ವಿಧಿ ಮತ್ತು ಸ್ವಇಚ್ಛೆಯ ಬಗೆಗೆ ನಾನು ಅರ್ಥ ಮಾಡಿಕೊಂಡಿರುವುದು ಸರಿ ಇದೆಯೇ ?
ಉತ್ತರ: ಸ್ವ ಇಚ್ಛೆ ಮತ್ತು ಹಣೆಬರಹ(ವಿಧಿ) ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಸ್ವ ಇಚ್ಛೆಯಿಂದ ಮಾಡಿದ ಕಾರ್ಯಗಳೇ ನಾಳೆಯ ವಿಧಿ. ನಿನ್ನೆ ನಿನ್ನ ಸ್ವ ಇಚ್ಛೆ ಏನಿತ್ತೋ ಅದು ಇಂದಿನ ವಿಧಿ. ನೀವು ಹಿಂದೆ ಏನು ಮಾಡಿರುತ್ತೀರೊ ಅದು ಇಂದಿನ ಕರ್ಮ ಆದರೆ ಅದರ ಜೊತೆಗೆ ಸ್ವ ಇಚ್ಛೆ ಕೂಡ ಬರುತ್ತೆ. ಮರಕ್ಕೆ ಆಕಳನ್ನು ಹಗ್ಗದಿಂದ ಕಟ್ಟಿದ ಹಾಗೆ - ಅದು ಅದರ ಹಣೆಬರಹ. ಹಗ್ಗ ಎಷ್ಟು ಹಗುರವಾಗಿ ಕಟ್ಟಲಾಗುವುದೋ ಅಷ್ಟು ಆಕಳು ಮರದ ಸುತ್ತ ಓಡಾಡಬಹುದು - ಅದು ಅದರ ಸ್ವ ಇಚ್ಛೆ. ಹೀಗಾಗಿ ಹಗ್ಗ ವಿಧಿ ಮತ್ತು ಸ್ವ ಇಚ್ಛೆ ಎರಡು ಕೂಡ.
ಜ್ಞಾನ, ಅರಿವು, ವಿವೇಕ, ಧ್ಯಾನ ಹೆಚ್ಚು ಮಾಡಿದಷ್ಟು ಸ್ವ ಇಚ್ಛೆ ಜಾಸ್ತಿ ( ಹಗ್ಗ ಇನ್ನೂ ಉದ್ಧವಾಗುವುದು). ಒಂದು ವೇಳೆ ರಸ್ತೆಯ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡರೆ ವಿಧಿ ಎಂದು ನೀವು ಹೇಳಬಹುದು. ಆದರೆ, ನಿಮ್ಮ ಅರಿವು, ಕಲೆ ಮತ್ತು ವಿವೇಕದಿಂದ ಬೇರೆ ದಾರಿಯನ್ನು ಹುಡುಕಲು ಸಾಧ್ಯವಾದರೆ ಅಥವಾ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಏನಾದರೂ ಮಾಡಲು ಸಾಧ್ಯವಾದರೆ ಅಥವಾ ಟ್ರಾಫಿಕ್ ಮೇಲೆ ಹಾರುವುದಾದರೆ, ಆಗ ನಿಮ್ಮ ಗುರಿಯನ್ನು ವೇಗವಾಗಿ ತಲುಪಲು ಸ್ವ ಇಚ್ಛೆ ಇರುತ್ತದೆ. ಈ ಸಾಮರ್ಥ್ಯ ಗುರುವಿನೊಂದಿಗೆ ಜ್ಞಾನದ ದಾರಿಯಲ್ಲಿ ಇದ್ದಾಗ ಬರುವುದು.
Comments