top of page
Divyapaada

ಪ್ರಶ್ನೆ : ನನ್ನ ತಂದೆ ಮತ್ತು ನಾನು ನನ್ನ ಕೆಲಸದಿಂದಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇದ್ದೇವೆ. ಅವರಿಗೆ ವಯಸ್ಸಾಗಿದೆ

ಮತ್ತು ಆರೋಗ್ಯದ ಸಮಸ್ಯೆಗಳೊಂದಿಗೆ ತೋಟದಲ್ಲಿ ಇದ್ದಾರೆ. ದೇವರ ಕೃಪೆಯಿಂದ , ಅವರ ದಿನನಿತ್ಯದ ಅವಶ್ಯಕತೆಗಳನ್ನು ನನ್ನ ಸಹೋದರ ಮತ್ತು ನೆರೆಮನೆಯವರು ನೋಡಿ ಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ನಾನು ಅವರ ಕಾಳಜಿ ವಹಿಸಲು ಆಗುತ್ತಿಲ್ಲವೆಂದು ಅಪರಾಧಿ ಪ್ರಜ್ಞೆ ಕಾಡುತ್ತದೆ. ಇದಕ್ಕೆ ಕಾರಣ ಅವರ ಕರ್ಮವೋ ಅಥವಾ ನನ್ನ ಕರ್ಮವೋ ? ಈ ಪರಿಸ್ಥಿತಿ ಯಲ್ಲಿ ಉತ್ತಮವಾದದ್ದು ಏನು ಮಾಡಬಹುದು ? ಜೈ ಗುರುದೇವ್.



ಉತ್ತರ : ಅವರನ್ನು ಹೋಗಿ ಯಾವಗಾದರೊಮ್ಮೆ ಭೇಟಿ ಆಗುತ್ತಿರಿ, ಫೋನ್/ಸ್ಕೈಪ್ ಮೂಲಕ ಸಂಪರ್ಕದಲ್ಲಿರಿ, ಆರ್ಥಿಕವಾಗಿ ಸಾಧ್ಯವಾದಷ್ಟು ಸಹಾಯಮಾಡಿ. ನೀವು ಯಾವಗಾದರೊಮ್ಮೆ ಅಲ್ಲಿ ಹೋದಾಗ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ. ತೋಟದ ಮನೆಯಲ್ಲಿ ಅವರೊಂದಿಗೆ ಸಮಯ ಕಳೆಯಿರಿ. ತೋಟದ ಮನೆಯಲ್ಲಿ ಪಿಕನಿಕ್ ಮತ್ತು ಸತ್ಸಂಗ ಆಯೋಜಿಸಿ ಹಾಗೂ ರಾತ್ರಿ ಪೊಟ್ಲಕ್ ( ಎಲ್ಲರೂ ಮನೆಯಿಂದ ತಮ್ಮದೇ ಅಡುಗೆ ಮಾಡಿ ತರುವುದು ) ಊಟ ಮಾಡಿ. ನಿರಂತರವಾಗಿ ಓಂ ನಮಃ ಶಿವಾಯ ಮತ್ತು ಇತರೆ ಮಂತ್ರಗಳನ್ನು ಪಠಿಸುವ ಟೇಪ್ ಅನ್ನು ತೋಟದ ಮನೆಯಲ್ಲಿ ಇಡಿ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಮಾಡಿ. ಕರ್ಮ ಮತ್ತು ಅಪರಾಧಿ ಪ್ರಜ್ಞೆ ಬಗ್ಗೆ ಚಿಂತಿಸಬೇಡಿ. ನಿಮ್ಮ ಉದ್ದೇಶಗಳು ಮುಖ್ಯ ಆಗುತ್ತವೆ. ನೀವು ಅವರಿಂದ ದೂರವಿದ್ದರೂ ಕೂಡ ಸಾಧನೆಯ ನಂತರ ನಿಮ್ಮ ಪ್ರಾರ್ಥನೆ ಮತ್ತು ಗುರುಗಳ ಆಶೀರ್ವಾದವನ್ನು ಕಳುಹಿಸಿ.

10 views0 comments

留言


Post: Blog2_Post
bottom of page