ನಾವು ಭೌತಿಕ ಪ್ರಪಂಚದಲ್ಲಿ ಇರಬೇಕಾಗುತ್ತದೆ; ಆದರೆ, ನನಗನ್ನಿಸುತ್ತದೆ ನಾನು ಭೌತಿಕ ಪ್ರಪಂಚದಲ್ಲಿ ಇದ್ದರೆ ಆಧ್ಯಾತ್ಮಿಕ ಅರಿವನ್ನು ಕಳೆದುಕೊಳ್ಳುತ್ತೇನೆ ಮತ್ತು ನಾನು ಸ್ವತಃ ಮಾಡಲಾಗುವುದಿಲ್ಲ. ಹೀಗಾಗಿ ನಾನು ಏನು ಮಾಡಲಿ ದಯವಿಟ್ಟು ತಿಳಿಸಿ.
ಉತ್ತರ : ವ್ಯತ್ಯಾಸ ಇದೆಯೆಂದು ತಿಳಿಯಬೇಡಿ. ಅದು ಕೇವಲ ನಮ್ಮ ಮನಸ್ಸಿನಲ್ಲಿ ಇರುವುದು. ಆಧ್ಯಾತ್ಮಿಕ ಜಗತ್ತು ಮತ್ತು ಭೌತಿಕ ಜಗತ್ತು ಇರುವುದು ನಮ್ಮ ಮನಸ್ಸಿನಲ್ಲಿ ಮಾತ್ರ. ನೀವು ಕುಟುಂಬಸ್ಥರಾಗಿರಬಹುದು (ಭೌತಿಕ ಜಗತ್ತು ಎಂದು ಹೇಳುವಲ್ಲಿ) ಆದರೂ ತುಂಬಾ ಆಧ್ಯಾತ್ಮಿಕ ಕೂಡ ಆಗಬಹುದು. ನೀವು ನಿರ್ಧರಿಸಿಕೊಳ್ಳಿ ವಾರಕ್ಕೆ ಒಂದು ಗಂಟೆ ಅಥವಾ ಹದಿನೈದು ದಿವಸಕ್ಕೆ ಒಂದು ದಿನ ಸೇವೆಯಲ್ಲಿ ತೊಡಗಿಸಿಕೊಳ್ಳುವಿರಿ ಎಂದು. ಅತಿ ದೊಡ್ಡ ಸೇವೆಯೆಂದರೆ ಒಬ್ಬರ ಮನಸ್ಥಿತಿಯನ್ನು ಮೇಲೆತ್ತುವದು. ನೀವು ನಿಮ್ಮ ಕೆಲಸ ಮಾಡುವ ಸ್ಥಳ ಅಥವಾ ವ್ಯಾಪಾರದಲ್ಲಿ ಮಾಡಬಹುದು. ಪ್ರತಿ ತಿಂಗಳು ಒಂದು ಅಥವಾ ಎರಡು ಶಿಬಿರವನ್ನು ಕಲಿಸಿಕೊಡಿ. ಈಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಉಪಯೋಗಿಸಬಹುದು ಮತ್ತು ಬಹಳಷ್ಟು ಸೇವೆ ಮಾಡಬಹುದು, ನಾವು ಈಗ ಹೇಗೆ ಮಾಡುತ್ತಿದ್ದೇವೋ ಹಾಗೆ.
ಗುರೂಜಿ ಹೇಳುತ್ತಾರೆ, ಸೈಕಲನ್ನು ಸಮತೋಲನದಿಂದ ನಡೆಸುವ ಹಾಗೆ ಯಾವಾಗ ಕುಟುಂಬ/ ಭೌತಿಕ ಜೀವನದ ಕಡೆಗೆ ಬಾಗುವಿರೋ ಸೇವೆಯ ಕಡೆಗೆ ಮತ್ತೆ ಬನ್ನಿ.
ನಾನು ಯಾವಾಗೆಲ್ಲಾ ನನ್ನ ಸಮಯವನ್ನು ಅವರ ಸೇವೆಗಾಗಿ ಮೀಸಲಿಟ್ಟಿದ್ದೇನೋ, ನನ್ನೆಲ್ಲಾ ವಯಕ್ತಿಕ ಚಿಂತೆಗಳು ಮತ್ತು ಸಮಸ್ಯೆಗಳು ಪರಿಹಾರಗೊಂಡಿವೆ. ನೀವು ನಿಮ್ಮ ಜೀವನದಲ್ಲಿ ಸೇವೆಗೆ ಮೊದಲು ಪ್ರಾಧಾನ್ಯತೆ ಕೊಟ್ಟರೆ , ಆಗ ಅದೇನೇ ಇರಲಿ ಯಾವುದರಲ್ಲೂ ಕಡಿಮೆ ಇರುವುದಿಲ್ಲ; ಮುಖ್ಯವಾಗಿ ನೀವು ಈ ಅದ್ಭುತವಾದ ದಾರಿಯಲ್ಲಿ ಇದ್ದಾಗ. ನೀವು ಬದ್ಧರಾಗಿದ್ದಲ್ಲಿ, ನೀವು ನಿಮ್ಮ ಕ್ಷಮತೆಯನ್ನು ಹೆಚ್ಚಿಸುವಿರಿ ಮತ್ತು ಎರಡರ ಸಮತೋಲನ ಕಾಪಾಡುವಿರಿ.
Comentários