ಆಚರಿಸಿತೆಂದು ತುಂಬಾ ಖುಷಿ ಆಗ್ತಿದೆ. ರಾತ್ರಿ 9 ಗಂಟೆ 9 ನಿಮಿಷದ ವಿಶೇಷತೆ ಏನೆಂದು ದಯವಿಟ್ಟು ತಿಳಿಸಿ.
ಉತ್ತರ: ದೀಪವನ್ನು ಹಚ್ಚುವುದರ ಸಾಂಕೇತಿಕ ಅರ್ಥ ಕತ್ತಲನ್ನು ಬೆಳಕಿನಿಂದ ಗೆಲ್ಲುವುದು. ಇದು ಕಾರಣಕ್ಕಾಗಿ ಒಗ್ಗಟ್ಟು ಎನ್ನುವುದನ್ನು ತೋರಿಸುತ್ತದೆ. ಸಂಖ್ಯೆ 9 ಎಂದರೆ ಮಂಗಳ ಗ್ರಹ. ಮಂಗಳ ಎಂದರೆ ನಮ್ಮ ಆತ್ಮಶಕ್ತಿ, ರೋಗ ನಿರೋಧಕ ಶಕ್ತಿ, ಹೋರಾಡುವ ಚೈತನ್ಯ, ಅಗ್ನಿ ತತ್ವ. 5 ಏಪ್ರಿಲ್ , ರವಿವಾರ ಸೂರ್ಯನ ದಿನ, ಬೆಂಕಿ ಮತ್ತು ಬೆಳಕಿನ ದಿನ. ಚಂದ್ರ ರವಿವಾರ ದಂದು ಸಿಂಹದಲ್ಲಿದ್ದ - ಸಿಂಹ ಸೂರ್ಯನ ಸಂಕೇತ. ಸೂರ್ಯ/ಬೆಳಕು ಮನಸ್ಸಿಗೆ ತುಂಬಾ ಶಕ್ತಿಯನ್ನು ನೀಡುತ್ತದೆ. ಚಂದ್ರ ನು ಶುಕ್ರನ ನಕ್ಷತ್ರದಲ್ಲಿ ಇದ್ದಾನೆ, ಶಾಂತಿ ಮತ್ತು ಸೌಹಾರ್ದತೆಯ ಗ್ರಹ.
9 ನಿಮಿಷಗಳ ವರೆಗೆ ದೀಪ ಹಚ್ಚುವುದರಿಂದ ಸೂರ್ಯನಿಂದ ಮಂಗಳಕ್ಕೆ ಶಕ್ತಿ ದೊರಕುತ್ತದೆ- ( ಅಗ್ನಿ ಶಕ್ತಿ, ಆತ್ಮ ಶಕ್ತಿ, ರೋಗ ನಿರೋಧಕ ಶಕ್ತಿ ಇತ್ಯಾದಿ ) ಶುಕ್ರ ಲಗ್ನದಲ್ಲಿ ಶಾಂತಿ ಮತ್ತು ಸೌಹಾರ್ದತೆ ತರುತ್ತದೆ.
ಪ್ರಧಾನಮಂತ್ರಿ ಯವರು ಅದೇ ದಿನಾಂಕ ಆಯ್ಕೆ ಮಾಡಿದ್ದು ಕಾಕತಾಳೀಯವೋ ಅಥವಾ ಅವರು ನಿಜವಾಗಲೂ ಜ್ಯೋತಿಷಿ/ಸಂಖ್ಯಾಶಾಸ್ತ್ರಜ್ಞ ರ ಸಲಹೆ ಪಡೆದರೊ ನನಗೆ ಗೊತ್ತಿಲ್ಲ.
ಅದೇನಿದ್ದರೂ ಸೂಕ್ಷ್ಮ ಸ್ಥರದಲ್ಲಿ, ಯಾವಾಗ 1.3 ಬಿಲಿಯನ್ ದೀಪ ಬೆಳಗುವುದೋ, ಅದು ಖಂಡಿತ ಕಂಪನವನ್ನು ಬದಲಿಸುತ್ತದೆ. ಕೊನೆ ಪಕ್ಷ ಕೆಲವು ತಿಂಗಳುಗಳ ತನಕ ನಾವು ಜಾಗೃತೆ ವಹಿಸಬೇಕು. ಇದು ದೀರ್ಘಕಾಲದ ಹೋರಾಟ ಮತ್ತು ನಮ್ಮ ಸಾತ್ವಿಕತೆ ಜಾಸ್ತಿ ಇದ್ದಷ್ಟು , ಸೂಕ್ಷ್ಮ ಪ್ರಪಂಚದ ಮೇಲೆ ನಾವು ಇನ್ನಿಷ್ಟು ಪ್ರಭಾವಿತಗೊಳಿಸಬಹುದು.
Comments