ನಾನು ಇತ್ತೀಚೆಗೆ ಜ್ಞಾನವನ್ನು ಕೇಳಲು ಶುರು ಮಾಡಿದೆ ಮತ್ತು ಒಮ್ಮೆಲೆ ಅರಿವಾಯಿತು ನಾನು ಇಷ್ಟು ಸಮಯ ವಿಧೇಯ ಇರಲಿಲ್ಲವೆಂದು ( ಸಂತಸದ ಶಿಬಿರ 10 ರಿಂದ 12 ವರ್ಷಗಳ ಹಿಂದೆ ಮಾಡಿದ್ದು ).
ಒಂದು ಕೋಣೆಯಲ್ಲಿ ನೂರಾರು ವರ್ಷಗಳಿಂದ ಕತ್ತಲು ಇದ್ದು ಮತ್ತು ಬಾಗಿಲು ಒಂದು ಚೂರು ತೆರೆದಾಗ, ಅದು ಇಡೀ ಕೋಣೆಯನ್ನು ಆವರಿಸುತ್ತದೆ. ಬೆಳಕಿಗೆ ರೂಮಿನೊಳಗೆ ಹರಡಲು ನೂರಾರು ವರ್ಷಗಳು ಬೇಕಿಲ್ಲ. ನಿಮ್ಮ ಜೀವನಕ್ಕೆ ಭಾವನೆಗಳಿಗಿಂತ ಬದ್ಧತೆಯನ್ನು ಆಧಾರ ಮಾಡಿ. ಭಾವನೆಗಳು ಬರುತ್ತವೆ ಮತ್ತು ಹೋಗುತ್ತವೆ. ಮುಂದಿನ 15 ದಿನಗಳು , ನೀವು ಒಳ್ಳೆ ಸೇವೆ, ಸಾಧನೆ ಮಾಡಿದರೆ, ನಿಮಗೆ ನಿಮ್ಮ ಬಗ್ಗೆ ಒಳ್ಳೆಯದು ಎನಿಸಿದರೆ ಏನು ? ನೀವು ಎಲ್ಲವೂ ಸರಿಯಾಗಿದೆ ಎಂದೆನಿಸಿ ಸಾಧನೆ ಮಾಡುವುದನ್ನು ನಿಲ್ಲಿಸಬಹುದು. ಇವತ್ತಿನ ಭಾವನೆ ನಾಳೆಗೆ ಇರುವುದಿಲ್ಲ. ಆದರೆ ಗಟ್ಟಿಯಾದ ಬದ್ಧತೆ ಉಳಿಯುತ್ತದೆ. ಆರಂಭದಲ್ಲಿ ನಿಮಗೆ ಸ್ವಲ್ಪ ಸವಾಲಾಗಿ ಕಾಣಬಹುದು. ಬದ್ಧತೆ ಎಂದರೆ ನಿಮ್ಮ ಸಾಮರ್ಥ್ಯವನ್ನು ಹಿಗ್ಗಿಸುವುದಾಗಿದೆ. ನೀವು ಎಷ್ಟು ನಿಮ್ಮ ಆರಾಮದ ಮಿತಿಯಿಂದ ಹೊರ ಬರುವಿರೋ, ನೀವು ಅಷ್ಟು ಆತ್ಮವಿಶ್ವಾಸ, ಸಂತೋಷ ಮತ್ತು ಆರಾಮವಾಗಿ ಇರುವಿರಿ.
Comments