ನನ್ನ ಅನಿಸಿಕೆ. ಇದ್ದರೆ ಅವರು ಗೋಚರಿಸುತ್ತಾರೆಯೇ ? ಮತ್ತು ಅವರ ಕರ್ತವ್ಯಗಳು ಏನು ದಯವಿಟ್ಟು ತಿಳುಹಿಸಿ.
ಉತ್ತರ : ನಿಮ್ಮ ಪ್ರಕಾರ ಚಿರಂಜೀವಿಗಳು ಎಂದರೆ ಸಾವಿರದವರು ಎಂದು ಭಾವಿಸುವೆ. ಯಾರು ಜನ್ಮವನ್ನು ಪಡೆಯುತ್ತಾರೋ ಅವರೆಲ್ಲಾ ಒಂದು ದಿನ ಸಾಯಲೇ ಬೇಕು. ಅದು ನಿಯಮ. ಅದೇನೇ ಇದ್ದರೂ ನಾವು ಸತ್ತಾಗ, ಸಾಯುವುದು ದೇಹ. ನಮ್ಮ ಮನಸ್ಸು ತನ್ನ ಗುರುತುಗಳೊಂದಿಗೆ (ಆತ್ಮ ಎನ್ನುವರು) ಹಾಗೆ ಉಳಿಯುವುದು. ಕಂಪನಗಳ ಆಧಾರದ ಮೇಲೆ ಆತ್ಮ ಮತ್ತೊಂದು ಹುಟ್ಟು/ದೇಹ ಆಯ್ದುಕೊಳ್ಳುತ್ತದೆ. ಸಾಕ್ಷಾತ್ಕಾರ ಪಡೆದವರ ವಿಚಾರವಾದಲ್ಲಿ, ಅವರಿಗೆ ತಮ್ಮ ಜನ್ಮ ಆಯ್ದುಕೊಳ್ಳುವ ಆಯ್ಕೆ ಇರುತ್ತದೆ ಏಕೆಂದರೆ ಅವರು ಯಾವುದೇ ಕರ್ಮದ ಬಂಧನ ದಲ್ಲಿ ಇರುವುದಿಲ್ಲ. ಕಥೆಗಳಿವೆ ಸಾಕ್ಷಾತ್ಕಾರ ಪಡೆದವರು ದೇಹವನ್ನು ಬಿಟ್ಟ ಮೇಲೆ ಮತ್ತೆ ಭೌತಿಕ ರೂಪದಲ್ಲಿ ಅವರ ಅನುಯಾಯಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ಅದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ ಆದರೆ ಸಾಧ್ಯತೆ ಇದೆ. ನಾವು ಹಿಮಾಲಯದಲ್ಲಿ ಗುರುಗಳು 400 - 450 ವರ್ಷಗಳಿಂದ ಇನ್ನೂ ಜೀವಿಸುತ್ತಿದ್ದಾರೆ ಎಂದು ಕೇಳಲ್ಪಟ್ಟಿದ್ದೇವೆ. ನಮ್ಮ ತರ್ಕಕ್ಕೆ ಮೀರಿ ಹಲವಾರು ಸಾಧ್ಯತೆಗಳು ಇವೆ. ಆ ರೀತಿಯಾಗಿ ಸಾವಿರದವರು ಬಹಳಷ್ಟು ಜನ ಇರಬಹುದು.
ಅಸ್ತಿತ್ವದ ವಿವಿಧ ಸ್ಥರಗಳಿವೆ (ಯಕ್ಷ ಲೋಕ, ದೇವ ಲೋಕ, ಗಂಧರ್ವ ಲೋಕ ಇತ್ಯಾದಿ) , ಪ್ರತಿಯೊಂದು ಕೂಡ ಬೇರೆ ಬೇರೆ ಕಂಪನಗಳನ್ನು ಹೊರಹೊಮ್ಮಿಸುತ್ತವೆ. ದೂರದರ್ಶನ(ಟಿವಿ) ಯ ಹಾಗೆ ಹಲವು ಚಾನೆಲ್ ಗಳಿವೆ. ಆದರೆ, ನಮಗೆ ಒಂದು ಬಾರಿಗೆ ಒಂದೇ ಕಂಪನ/ಚಾನೆಲ್ ನೋಡಲು ಆಗುವುದು. ಅದೇ ರೀತಿಯಾಗಿ ಅಸ್ತಿತ್ವದಲ್ಲಿ ವಿವಿಧ ರೀತಿಯ ಜೀವಿಗಳು ಇದ್ದಾರೆ ಮತ್ತು ನಮ್ಮ ಮುಂದೆ ಬರುವ ಆಯ್ಕೆ ಅವರು ತೆಗೆದುಕೊಳ್ಳಬಹುದು. ಅದೇನೇ ಇದ್ದರೂ ಮೇಲಿನ ಸ್ಥರದ ಅಸ್ತಿತ್ವದಲ್ಲಿ ಜೀವಿಸುವ ಎಲ್ಲಾ ಜೀವಿಗಳು ಅನುಗ್ರಹಿಸುವರು.
Comentarios