ಹೋಗುವುದಿಲ್ಲ ಹಾಗೂ ಪರಿಸ್ಥಿತಿಗಳು ನನಗೆ ವ್ಯತಿರಿಕ್ತವಾಗಿ ಇರುತ್ತವೆ. ನಾನು ಕೊನೆಯಲ್ಲಿ ಕಂಪಿಸಿ ಬಿಡುತ್ತೇನೆ, ನನಗನ್ನಿಸುತ್ತದೆ ನಾನಿನ್ನೂ ಹೊಸ ಯೋಜನೆಗಳಿಗೆ ತಯಾರು/ಯೋಗ್ಯತೆ ಇಲ್ಲಾ. ನನ್ನ ಭವಿಷ್ಯದ ಬಗ್ಗೆ ನಾ ಶೂನ್ಯನಾಗುತ್ತೇನೆ. ನಾನು ಇದನ್ನು ಹೇಗೆ ನಿಭಾಯಿಸುವುದು ?
ಉತ್ತರ: ಗುರೂಜಿ ಹೇಳುತ್ತಾರೆ, ನೀವು ದೇವರನ್ನು ನಗಿಸಬೇಕು ಎಂದಿದ್ದರೆ ನಿಮ್ಮ ಯೋಜನೆಗಳನ್ನು ಹೇಳಿ 😊 ನಿಮ್ಮ ಯೋಜನೆ ಮತ್ತು ಗುರಿಗಳು ಈಡೇರಲು - ಉದ್ದೇಶ, ಗಮನ ಮತ್ತು ಅಭಿವ್ಯಕ್ತ. ಉದ್ದೇಶ ನಿಮ್ಮ ಸಂಕಲ್ಪ. ನೀವು ಯಾವಾಗ ಸಂಕಲ್ಪವನ್ನು ಮಾಡುತ್ತೀರೊ ಅದನ್ನು ದೇವರಿಗೆ ಸಮರ್ಪಿಸಿ ಆ ನಂತರ ಕೆಲಸ ಮಾಡಿ. ನಿಮ್ಮ ಉದ್ದೇಶಗಳಿಗೆ ಜೋತಾಡುತ್ತಾ ಕೂಡಬೇಡಿ, ಅದು ಆಸೆಯ ಜ್ವರವಾಗಿ ಬಿಡುತ್ತದೆ.
ಭವಿಷ್ಯ ಎಂದಿಗೂ ಅನಿಶ್ಚಿತ. ಯಾರಿಗೆ ಗೊತ್ತಿತ್ತು ಒಂದು ಅದೃಶ್ಯ ವೈರಾಣುವಿನಿಂದ ಜಗತ್ತು ಸ್ಥಗಿತಗೊಳ್ಳುವುದೆಂದು ? ಯಾವಾಗಲೂ ಒಂದು ದೊಡ್ಡ ಶಕ್ತಿ/ ದೊಡ್ಡ ಬುದ್ಧಿ ಇದೆ, ಅದು ನಮ್ಮ ಯೋಜನೆಗಳಿಗೆ ಮೀರಿ ಕೆಲಸ ಮಾಡುತ್ತಿದೆ. ನಾನು ಚಿಕ್ಕವನಾಗಿದ್ದಾಗ, ನನ್ನ ಯೋಜನೆ ಏನಿತ್ತೆಂದರೆ ನಾನು ದೊಡ್ಡವನಾದ ಮೇಲೆ ಒಬ್ಬ ಟ್ರಕ್ ಚಾಲಕನಾಗಬೇಕು ಮತ್ತು ದೇವರಿಗೊಂದು ಧನ್ಯವಾದ ಅದು ನಿಜವಾಗಲಿಲ್ಲ. ಅದಕ್ಕೆ ಗುರುದೇವರು ಯಾವಾಗಲೂ ಹೇಳುತ್ತಾರೆ ಪ್ರಾರ್ಥಿಸುವಾಗ ನಾವು ಈ ರೀತಿ ಪ್ರಾರ್ಥಿಸಬೇಕು " ನನಗೆ ಇದನ್ನು ನೀಡು ಇಲ್ಲವೇ ಇದಕ್ಕಿಂತ ಉತ್ತಮವಾದುದನ್ನು ".
ಬಲಿಷ್ಟವಾದ ಬದ್ಧತೆ ಇರಲಿ, ಯೋಜನೆ ಮಾಡಿ ಮತ್ತು ಯೋಜನೆಗೆ ತಕ್ಕ ಹಾಗೆ ಪರಿಸ್ಥಿತಿಗಳು ಹೋಗದಿದ್ದರೆ , ಹೊಂದಿಕೊಳ್ಳಿ ಹಾಗೂ ಹೊಸ ಆಲೋಚನೆಗಳನ್ನು ಸ್ವೀಕರಿಸಿ.
ಸ್ವತಃ ನೀವು ಮಾತ್ರ ನಿಶ್ಚಿತ. ನೀವು ಧ್ಯಾನ ಮಾಡಿದಷ್ಟು , ನಿಮ್ಮೊಂದಿಗೆ ನೀವು ಇರುತ್ತೀರಾ, ನೀವು ಸುಲಭವಾಗಿ ಭವಿಷ್ಯದ ಅನಿಶ್ಚಿತತೆಯ ಜೊತೆಗೆ ವ್ಯವಹರಿಸಬಲ್ಲಿರಿ.
ಆರಂಭದಲ್ಲಿ ನೈಜವಾದ ಯೋಜನೆಗಳನ್ನು ಹಾಕಿಕೊಳ್ಳಿರಿ ಮತ್ತು ಒಮ್ಮೆ ಅದರೊಂದಿಗೆ ಆಡುವ ಆತ್ಮವಿಶ್ವಾಸ ಬಂದರೆ ದೊಡ್ಡ ಕನಸುಗಳನ್ನು ಕಾಣಿರಿ.
ಮೊದಲು ಚಿಕ್ಕ ಗುರಿ/ ಯೋಜನೆ ಯೊಂದಿಗೆ ಆರಂಭಿಸಿ ಮತ್ತು ಯಾವಾಗ ಅದನ್ನು ಸಾಧಿಸುವಿರೋ, ನಿಮ್ಮಲ್ಲಿ ವಸ್ತುಗಳನ್ನು ಮುಂದಿನ ಸ್ಥರಕ್ಕೆ ತೆಗೆದುಕೊಂಡು ಹೋಗುವ ಆತ್ಮವಿಶ್ವಾಸ ಬರುತ್ತದೆ.
Comments