top of page
Divyapaada

ಪ್ರಶ್ನೆ : ಗುರೂಜಿ ಹೇಳುತ್ತಾರೆ ಸಮರ್ಪಿಸಿ, ನಿಮ್ಮಿಂದ ಏನೂ ಮಾಡಲಾಗದಿದ್ದರೆ ಸಮರ್ಪಿಸಿ.

ನಾನು ನನ್ನ ನಕಾರಾತ್ಮಕ ಭಾವನೆಗಳನ್ನು ಸಮರ್ಪಿಸುತ್ತಲೇ ಇರುತ್ತೇನೆ ಆದರೂ ಅದು ಹೋಗುತ್ತಿಲ್ಲ. ನಾನು ಇದರಿಂದ ಹೇಗೆ ಹೊರಗೆ ಬರುವುದು ( ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಖಂಡಿತ ಈಗ ಕಡಿಮೆ ಆಗಿದೆ )





ಉತ್ತರ: ಸಮರ್ಪಿಸುವುದು ಕ್ರೀಯೆ ಅಲ್ಲಾ, ಅದು ಆಗಿ ಬಿಡುತ್ತದೆ. ಉಸಿರು ತೆಗೆದುಕೊಂಡು ಹಿಡಿದಿಡಿ. ಎಲ್ಲಿಯವರೆಗೆ ಹಿಡಿದಿಡಲು ಸಾಧ್ಯ. ಒಂದು ಸಮಯ ನೀವು ಬಿಟ್ಟು ಬಿಡಲೇ ಬೇಕು. ಆ ರೀತಿ ಬಿಟ್ಟು ಬಿಡುವುದೇ ಆಗಿ ಬಿಡುವುದಾಗಿದೆ. ಒಂದು ಸತ್ಸಂಗದಲ್ಲಿ ಯಾರೋ ಗುರುದೇವರಿಗೆ ಕೇಳಿದ್ರು " ಗುರೂಜಿ ನಾನೆಷ್ಟು ಮಾಡಬೇಕು ಮತ್ತು ನೀವೆಷ್ಟು ನೋಡಿಕೊಳ್ಳುವಿರಿ" ಗುರುದೇವ್ ಉತ್ತರಿಸಿದರು " ನೀವು 100% ಮಾಡು ಮತ್ತು ನಾನು 100% ನೋಡಿಕೊಳ್ಳುವೆ" . ನಿಮ್ಮ ನಕಾರಾತ್ಮಕ ಭಾವನೆಗಳ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು ಮತ್ತು ಯಾವಾಗ ಇನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನಿಸುವುದೋ ಆಗ ಗುರುವಿಗೆ ಸಮರ್ಪಿಸಿ. ಈ ನಕಾರಾತ್ಮಕ ಭಾವನೆಗಳ ಮಾದರಿಯನ್ನು ಗುರುತಿಸಿದ್ದೀರಾ ? ಈ ಅಭ್ಯಾಸ/ಮಾದರಿಯಿಂದ ಹೊರ ಬರಲು ಬೇಕಾಗುವಷ್ಟು ಪ್ರಯತ್ನವನ್ನು ಮಾಡಿದ್ದೀರಾ ? ನಿಮ್ಮ ಕೌಶಲ್ಯಗಳನ್ನು ಉಪಯೋಗಿಸಿದ್ದೀರಾ ನಿಮ್ಮ ಕೈಯಲ್ಲಿ ಸಾಧ್ಯವಿರುವುದೆಲ್ಲವನ್ನೂ ಮಾಡಿದ್ದೀರಾ ?

ಅದಾದ ಮೇಲೆ ಇನ್ನೂ ಆಗುವುದಿಲ್ಲ ಎಂದಾದಾಗ ನೀವು ಬಿಟ್ಟು ಬಿಡುವರಿ/ಸಮರ್ಪಿಸುವಿರಿ. ಯಾವ ಪ್ರಾರ್ಥನೆ ಕೂಡ ವ್ಯರ್ಥವಾಗುವುದಿಲ್ಲ. ತಡವಾಗಬಹುದು ಆದರೆ ಅಸ್ವೀಕಾರಗೊಳ್ಳುವುದಿಲ್ಲ. ಅವರು ಹೇಳುತ್ತಾರೆ, ನಾನು ನಿಮಗೆ ಬೀಳುತ್ತಿರುವಿರಿ ಎಂದೆನಿಸುವಂತೆ ಮಾಡುವೆ ಆದರೆ ಎಂದಿಗೂ ನಿಮಗೆ ಬೀಳಲು ಬಿಡುವುದಿಲ್ಲ. ವಿಶ್ವಾಸ ಮತ್ತು ತಾಳ್ಮೆ ಇರಲಿ.

8 views0 comments

Comments


Post: Blog2_Post
bottom of page