ನನ್ನ ಹವ್ಯಾಸವನ್ನುಸುಧಾರಣೆ ಮಾಡುವುದು , ಅಮ್ಮನಿಗೆ ಸಹಾಯ ಮಾಡುವುದು ಇತ್ಯಾದಿ ಆದರೆ ಈಗಲೂ ಬೇಜಾರು ಎನಿಸುತ್ತಿದೆ. ದಯವಿಟ್ಟು ಮಾರ್ಗದರ್ಶನ ನೀಡಿ.
ಉತ್ತರ : ಗುರುದೇವ್ ಹೇಳಿದ್ದಾರೆ ಈ ಗೃಹ ಬಂಧನದ ಸಮಯ ವಿಶ್ರಮಿಸಲು, ಸುಧಾರಿಸಿಕೊಳ್ಳಲು, ಆತ್ಮವಿಮರ್ಶೆ ಮಾಡಿಕೊಳ್ಳಲು ಮತ್ತು ವಸ್ತುಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಒಂದು ಉತ್ತಮ ಅವಕಾಶ. ಹೊಸ ಭಾಷೆ ಕಲಿಯಲು ಪ್ರಯತ್ನಿಸಿ - 10 ಸಾಲುಗಳು ಪ್ರತಿದಿನ ಹೊಸ ಭಾಷೆಯಲ್ಲಿ, ಪ್ರತಿದಿನ ಯೋಗ ವಶಿಷ್ಠ ಪುಸ್ತಕದ ಒಂದು ಪುಟ ಓದಿ ಮತ್ತು ಬೇರೆ ಜ್ಞಾನವನ್ನು ಓದಿ. ಹೊಸ ಅಡುಗೆ ಪ್ರಯತ್ನಿಸಿ - ಉತ್ತರ ಭಾರತದ್ದು ಒಂದು ದಿನ, ಇಟಲಿಯದ್ದು ಇನ್ನೊಂದು ದಿನ ಇತ್ಯಾದಿ, ಹಾಡುವುದನ್ನು ಕಲಿಯಿರಿ. ನಿಮ್ಮ ಕುಟುಂಬವನ್ನು ಭಜನೆಗಳನ್ನು ಹಾಡಲು, ಆನ್ಲೈನ್/ಆಫ್ಲೈನ್ ಅಂತಾಕ್ಷರಿ ಗೆ, ಯೋಗ ಮಾಡಲು ಕರೆಯಿರಿ - ವಿಭಿನ್ನ ಆಸನಗಳು ವಿಭಿನ್ನ ಆರೋಗ್ಯ ಪರಿಸ್ಥಿತಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿ. ಆಳವಾದ ಧ್ಯಾನಕ್ಕೆ ಹೋಗಿ, ಕಲಿಯುವುದಕ್ಕೆ ಕೊನೆಯೇ ಇಲ್ಲಾ. ಅಂತರ್ಜಾಲದಲ್ಲಿ ಮತ್ತು ಆನ್ಲೈನ್ ನಲ್ಲಿ ನೀವು ಮಾಡಬಹುದಾದ ಎಷ್ಟೊಂದು ಉಪಯೋಗಕಾರಿ ವಸ್ತುಗಳಿವೆ. ನಿಮ್ಮನ್ನು ನೀವು ನಿರತಗೊಳಿಸಿ. ನಿಮಗೆ ಸರಿಯಾಗಿ ವಿಶ್ರಮಿಸಲು ಗೊತ್ತಿಲ್ಲದಿದ್ದರೆ, ನಿಮಗೆ ಚೈತನ್ಯಯುತವಾಗಿರುವುದು ಕೂಡ ಗೊತ್ತಿರುವುದಿಲ್ಲ.
Comentários