ಸಾವು ಎನ್ನುವುದು ಆಳವಾದ ನಿದ್ದೆ. ಗಮನಿಸಿ ಮಲಗುವ ಮುಂಚೆ ಬಂದ ಕೊನೆಯ ವಿಚಾರ ಮತ್ತು ನೀವು ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದರೆ , ಮರುದಿನ ಬೆಳಿಗ್ಗೆ ಹಿಂದಿನ ರಾತ್ರಿ ಬಂದ ಯೋಚನೆಯೇ ಮತ್ತೆ ಬರುತ್ತದೆ.
ಸಾಯುವ ಸಮಯದಲ್ಲಿ, ನಮ್ಮ ಬದುಕಿನ ಎಲ್ಲಾ ಘಟನೆಗಳು ಒಂದು ಅಥವಾ ಎರಡು ನಿಮಿಷದೊಳಗೆ ಚೈತನ್ಯದಲ್ಲಿ ಹಾದು ಹೋಗುತ್ತದೆ. ಆತ್ಮ ಅತಿ ತೀವ್ರ ಘಟನೆ / ಆಸೆ / ಕಂಪನವನ್ನು ವನ್ನು ಹಿಡಿಯುತ್ತದೆ ಮತ್ತು ಆ ಗುರುತು ನಿರ್ಧರಿಸುತ್ತದೆ ನಮ್ಮ ಮುಂದಿನ ಜನ್ಮ - ನಾವು ಇರಬೇಕಾದ ಸ್ಥಳ, ನಮ್ಮ ತಂದೆ ತಾಯಿ ಇತ್ಯಾದಿ. ಹೀಗಾಗಿ, ಪುನರ್ಜನ್ಮಕ್ಕೆ ಕಾರಣ ಗುರುತುಗಳು ಮತ್ತು ಈಡೇರದ ಆಸೆಗಳು. ಎಲ್ಲಿಯವರೆಗೆ ಆತ್ಮಕ್ಕೆ ಆಸೆಗಳು ಇರುತ್ತವೆಯೋ , ಅದು ಪುನರ್ಜನ್ಮ ಪಡೆಯಲೇ ಬೇಕು.
ಈ ಬದುಕು ಮತ್ತು ಹುಟ್ಟು ವಿನ ವಿಷವರ್ತುಲ ದಿಂದ ಹೊರ ಬರಬೇಕೆಂದರೆ ಒಳಗಿನಿಂದ ಖಾಲಿ ಆಗಬೇಕು. ಕೆಲವರು ಮೋಕ್ಷ, ಮುಕ್ತಿ, ಸಮಾಧಿ, ಸಾಕ್ಷಾತ್ಕಾರ ಇತ್ಯಾದಿ ಹೇಳುವರು.
ನಮ್ಮ ಉನ್ನತ ಧ್ಯಾನ ಶಿಬಿರ ಖಾಲಿ ಮತ್ತು ಟೊಳ್ಳು ಧ್ಯಾನ ಇದನ್ನು ಮಾಡುತ್ತದೆ. ನಾವು ಆಸೆ, ಮೋಹ ಮತ್ತು ಜ್ವರ(ಹುಚ್ಚುತನ) ಗಳಿಂದ ಸ್ವಾತಂತ್ರ್ಯ ಪಡೆದರೆ ಗುರುತುಗಳು ಇರುವುದಿಲ್ಲ. ಈ ಸ್ಥರವನ್ನು ಪಡೆಯಲು ಹಲವಾರು ದಾರಿಗಳಿವೆ ಮುಖ್ಯವಾಗಿ 4 - ಜ್ಞಾನ ಯೋಗ , ಭಕ್ತಿ ಯೋಗ, ಕರ್ಮ ಯೋಗ(ಸೇವೆ ಮಾಡುವ ಮೂಲಕ), ರಾಜ ಯೋಗ (ಸಾಧನೆ ಮಾಡುವ ಮೂಲಕ) . ಭಕ್ತಿ ಮಾರ್ಗ ನಾಲ್ಕು ಮಾರ್ಗ ಗಳಲ್ಲಿ ಅತಿ ಸುಲಭದ್ದು. ಕೊನೆಗೆ ಎಲ್ಲವೂ ಸೇರುವುದು ಆಳವಾದ ಧ್ಯಾನದಲ್ಲಿ. ಅದೆಲ್ಲಕ್ಕಿಂತ, ಗುರುಗಳ ಕೃಪೆ ಮುಖ್ಯವಾಗುತ್ತೆ.
ಆರ್ಟ್ ಆಫ್ ಲಿವಿಂಗ್ ಒಂದು ಸಂಪೂರ್ಣ ಮಾರ್ಗ ಇದರಲ್ಲಿ ನಾಲ್ಕು ಮಾರ್ಗ ಗಳು ಕೂಡ ಇವೆ ಮತ್ತು ಅದೆಲ್ಲಕ್ಕಿಂತ ಪ್ರಮುಖವಾಗಿ ನಮ್ಮ ಅದೃಷ್ಟ ಗುರುಗಳ ಕೃಪೆ ನಮ್ಮೊಡನೆ ಇವೆ. ಗುರು ದಾರಿಯನ್ನು ಕೊಟ್ಟಿರುವುದು ಮಾತ್ರವಲ್ಲ , ನಾವು ಗುರಿಯನ್ನು ಮುಟ್ಟುವಂತೆ ನೋಡಿಕೊಳ್ಳುತ್ತಾರೆ. ನಾನು ಸಲಹೆ ನೀಡುವುದು ನಾವೆಲ್ಲಾ ಈ ಜನ್ಮದಲ್ಲಿಯೇ ಹೋಗೋಣ😊 ಮುಂದೆ ಏನಾಗುತ್ತದೆ ಎಂದು ಯಾರಿಗೆ ಗೊತ್ತು ? ನಮಗೆ ಇವರಂತ ಗುರು ಸಿಗುವರೊ ಅಥವಾ ಇಲ್ಲವೊ. ಒಳ್ಳೇದು ಅಂದರೆ ಈ ಜನ್ಮದಲ್ಲಿಯೇ ಮಾಡೋಣ. ಏನು ಹೇಳುವಿರಿ ?
Comments