ಬೇರೆಯವರ ಮಾತು ಕೇಳುತ್ತಿದ್ದಂತೆ ನನ್ನ ಯೋಚನೆಗಳನ್ನು ಅವರ ಯೋಚನೆಗಳು ಅತಿಕ್ರಮಿಸಿಬಿಡುತ್ತವೆ.
ತಡೆಯಲು ಪ್ರಯತ್ನಿಸಿ, ನಾನು ಸ್ವತಃ ಕಷ್ಟ ಪಟ್ಟು ಕೊನೆಗೆ ಅಂದುಕೊಂಡಂತೆ ಯಾವ ಫಲಿತಾಂಶವೂ ಸಿಗುವುದಿಲ್ಲ.
ಉತ್ತರ : ನೀವು ಹೇಳುತ್ತಿರುವುದು ಅ ವ್ಯಕ್ತಿ ಬ ವ್ಯಕ್ತಿಯ ಬಗ್ಗೆ ಮಾತನಾಡಿದರೆ ನಿಮ್ಮ ಬ ವ್ಯಕ್ತಿಯ ಬಗೆಗಿನ ಆಲೋಚನೆಗಳನ್ನು ಅತಿಕ್ರಮಿಸಿಕೊಂಡು ಬಿಡುತ್ತದೆ ಎಂದಲ್ಲವೇ ? ಮೊದಲನೇಯದಾಗಿ ಮೂರನೇ ವ್ಯಕ್ತಿಯ ಬಗ್ಗೆ ಮಾತನಾಡುವುದು ಸಮಯ ವ್ಯರ್ಥ. ಅದು ಬಿಟ್ಟು. ಈಗ ದಿನಕ್ಕೆ 50 ಜನರನ್ನು ಭೇಟಿ ಆಗುತ್ತೀರಾ ಎಂದುಕೊಳ್ಳೋಣ. ಎಲ್ಲಾ 50 ಜನ ಒಬ್ಬ ವ್ಯಕ್ತಿಯ ಬಗ್ಗೆ 50 ವಿವಿಧ ಅಭಿಪ್ರಾಯಗಳನ್ನು ಹೊಂದಿದ್ದಾರೆ ಮತ್ತು ಅವರು ದಿನಕ್ಕೆ 50 ಸಲ ನಿಮ್ಮ ಆಲೋಚನೆಗಳನ್ನು ಅತಿಕ್ರಮಿಸುತ್ತಾರೆ ! ನಿಮ್ಮ ಮನಸ್ಸು ಮತ್ತು ನರಮಂಡಲಕ್ಕೆ ಏನು ಆಗಬಹುದು ಎಂದು ಕಲ್ಪಿಸಿಕೊಳ್ಳಬಹುದಾ ? ತಲೆ ಕೆಟ್ಟು ಕೊನೆಗೆ ಹುಚ್ಚಾಸ್ಪತ್ರೆ ಸೇರಬೇಕಾಗುತ್ತದೆ. ಯಾಕೆಂದರೆ ನಾವು ನಮ್ಮ ಮತ್ತು ಬೇರೆಯವರ ಬಗ್ಗೆ ಜನರು ನೀಡುವ ಅನಿಸಿಕೆಗಳಿಗೆ ಅತಿಯಾಗಿ ಪ್ರಾಧಾನ್ಯತೆ ನೀಡುವುದು. ಅನಿಸಿಕೆ ಕೇವಲ ಒಂದು ಯೋಚನೆ ಮತ್ತು ಅದು ಬದಲಾಗುತ್ತಲೇ ಇರುತ್ತದೆ. ಇವತ್ತೊಂದು ಹೇಳುತ್ತಾರೆ ನಾಳೆಗೆ ಅದರ ತದ್ವಿರುದ್ಧವಾಗಿ ಮಾತನಾಡುತ್ತಾರೆ. ಯಾಕೆಂದರೆ ಸ್ವತಃ ಅವರ ಯೋಚನೆಗಳೇ ಬದಲಾಗುತ್ತಿರುತ್ತದೆ. ಅಲ್ವಾ ? ಈ ಭೂಮಿಯ ಮೇಲೆ 7.5 ಬಿಲಿಯನ್ ಜನರಿದ್ದಾರೆ ಮತ್ತು ಪ್ರತಿಯೊಬ್ಬರೂ ನಿಮ್ಮ ಹಾಗೂ ಬೇರೊಬ್ಬರ ಬಗ್ಗೆ ತಮ್ಮದೇ ಆದ ಅನಿಸಿಕೆಗಳನ್ನು ಹೊಂದಿದ್ದಾರೆ. ನೀವು ಎಲ್ಲಾ 7.5 ಬಿಲಿಯನ್ ಜನರನ್ನು ಕೇಳಲಾಗದು ! ಎಲ್ಲರೂ ಒಂದೇ ರೀತಿಯ ಅಭಿಪ್ರಾಯ ಹೊಂದಿರಲು ಸಾಧ್ಯವಿಲ್ಲ. ಮೂಲದಿಂದ ನೋಡಿದ್ರೆ ಇದಕ್ಕೆ ಕಾರಣ ನಮ್ಮೆಡೆಗಿನ ಆತ್ಮವಿಶ್ವಾಸದ ಕೊರತೆ. ಅದರಿಂದಾಗಿ ತಾರತಮ್ಯದ ಸಂದರ್ಭದಲ್ಲಿ ನಾವು ಕಳೆದುಹೋಗಿ ಕೇವಲ ಜನರ ಅನಿಸಿಕೆಗಳನ್ನು ಗಮನಿಸುವ ಬದಲಿಗೆ ಪ್ರತಿಕ್ರಿಯಿಸಿ ಬಿಡುತ್ತೇವೆ. ಇದಕ್ಕಾಗಿ ನೀವು ಗಟ್ಟಿ ಆಗಬೇಕು. ಕೆಲವೊಮ್ಮೆ ನೀವು ನಿಮ್ಮದು ಸರಿಯೆಂದು ನಿಲ್ಲಬೇಕು, ಇನ್ನೂ ಕೆಲವೊಮ್ಮೆ ಇಲ್ಲಾ ಎಂದು ಹೇಳಿದರೂ ಪರವಾಗಿಲ್ಲ. ಜನರ ಅಭಿಪ್ರಾಯ ಒಪ್ಪಿಕೊಳ್ಳದಿದ್ದರೂ ನಡೆಯುತ್ತೆ. ಆ ಶಕ್ತಿ ಯೋಗದಿಂದ ಬರುತ್ತದೆ, (ಸೂರ್ಯ ನಮಸ್ಕಾರ ಮಾಡಿ) ಇದು ಸೂರ್ಯ ನರತಂತು ಜಾಲ ಕ್ಕೆ (ಸೋಲಾರ್ ಪ್ಲೆಕ್ಸಸ್) ಒಳ್ಳೆಯದು ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮಾನಸಿಕ ಕಸರತ್ತು ಕಡಿಮೆ ಮಾಡುತ್ತದೆ. ಜ್ಞಾನದಲ್ಲಿ ಇರಿ. ಧ್ಯಾನ ನಿಮಗೆ ಬುದ್ಧಿವಂತಿಗೆಯಿಂದ ಪ್ರತಿಸ್ಪಂದಿಸಲು ಸಹಾಯ ಮಾಡುತ್ತದೆ ಮತ್ತು ಪ್ರತಿಕ್ರಿಯಿಸುವುದು ಇಲ್ಲವೇ ಪ್ರಾಬಲ್ಯಕ್ಕೆ ಒಳಗಾಗಿ ಅವರ ಯೋಚನೆಗಳೊಂದಿಗೆ ಹೋಗುವುದಕ್ಕಿಂತ ಸೂಕ್ಷ್ಮವಾಗಿ ಇಲ್ಲಾ ಎಂದುಬಿಡಿ. ಅಭಿವ್ಯಕ್ತ ಪಡಿಸುವುದನ್ನು ಸುಧಾರಿಸಿಕೊಳ್ಳಿ. ನಿಮ್ಮನ್ನು ಅಭಿವ್ಯಕ್ತ ಪಡಿಸುವಾಗ ಮೃದುವಾಗಿ ಮತ್ತು ಸ್ಥಿರವಾಗಿ ನೀವು ಇರಬಹುದು. ಮೌನದಲ್ಲಿ ಸ್ವಲ್ಪ ಕಾಲ ಕಳೆಯಿರಿ. ದೂರದ ವರೆಗೆ ನಡೆಯಿರಿ ಅಥವಾ ಓಡಿರಿ. ಇದು ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ ಮತ್ತು ಮತ್ತು ಸ್ವಾವಲಂಬಿಯಾಗಿಸುತ್ತದೆ.
Comments