ನಾನು ನಿರಂತರವಾಗಿ ಸಾಧನೆ ಮಾಡುತ್ತೇನೆ ಆದರೂ ಎಷ್ಟೊಂದು ಗೊಂದಲ, ಭಯ ಮತ್ತು ಚಿಂತೆ ಮುಖ್ಯವಾಗಿ ನಾನು ನಿರ್ಧಾರವನ್ನು ತೆಗೆದು ಕೊಳ್ಳಬೇಕಾದ ಸಮಯದಲ್ಲಿ.
ಉತ್ತರ: ನಿರ್ಧಾರ ಎಂದಿಗೂ ಉತ್ತಮ ಮತ್ತು ಅತ್ತ್ಯುತ್ತಮ ದ ಮಧ್ಯೆ ಇರುತ್ತದೆ. ಅದೆಂದಿಗೂ ಒಳ್ಳೆಯ ಮತ್ತು ಕೆಟ್ಟದರ ಮಧ್ಯದಲ್ಲಿ ಇರುವುದಿಲ್ಲ. ಒಂದು ವೇಳೆ ಒಳ್ಳೆ ಮತ್ತು ಕೆಟ್ಟದರ ಮಧ್ಯೆ ಇದ್ದಲ್ಲಿ, ನೀವು ಕೆಟ್ಟದ್ದನ್ನು ಆಯ್ಕೆ ಮಾಡುವುದಿಲ್ಲ.
ಯಾವುದು ದೀರ್ಘಕಾಲಕ್ಕೆ ಸಂತೋಷ ಆದರೆ ಅಲ್ಪಕಾಲಕ್ಕೆ ಸಂಘರ್ಷ ವನ್ನು ತರುವುದೋ ಅದು ಉತ್ತಮ ನಿರ್ಧಾರ. ಯಾವುದು ಅಲ್ಪಕಾಲಕ್ಕೆ ಸಂತೋಷವನ್ನು ತಂದು ದೀರ್ಘಕಾಲಕ್ಕೆ ಸಂಘರ್ಷವನ್ನು ತರುವುದೋ ಅದು ಅಷ್ಟೊಂದು ಒಳ್ಳೆಯ ನಿರ್ಧಾರ ಅಲ್ಲಾ (ಕೆಟ್ಟದ್ದಲ್ಲಾ). ನಿಮ್ಮ ಮುಂದೆ ಆಯ್ಕೆಗಳು ಇದ್ದಾಗ, ಎರಡು ಆಯ್ಕೆಗಳ ಸಕರಾತ್ಮಕ ನಕಾರಾತ್ಮಕ ಅಂಶಗಳನ್ನು ತೂಗಿ ನೋಡಿ. ನಿಮ್ಮ ಯೋಚನೆಯಲ್ಲಿ ಸ್ಪಷ್ಟತೆ ಮತ್ತು ಅನುಭವ ಇರುವವರ ಬಳಿ ಸಲಹೆ ಕೇಳಿದಾಗ ಒಳ್ಳೆ ನಿರ್ಧಾರವನ್ನು ಕಂಡುಕೊಳ್ಳಬಹುದು. ನೀವು ಅಂದುಕೊಂಡ ದಾರಿಯಲ್ಲಿ ಮೊದಲೇ ಯಾರಾದರೂ ನಡೆದಿದ್ದರೆ ಅವರ ಸಲಹೆ ತೆಗೆದುಕೊಳ್ಳಬಹುದು. ಇದು ತುಂಬಾ ಹೊಸದಾಗಿದ್ದರೆ, ನಿಮ್ಮದೇ ನಿರ್ಧಾರ ತೆಗೆದುಕೊಳ್ಳಿ - ಗುರುದೇವ್ ಯಾವಾಗಲೂ ಹೇಳುತ್ತಾರೆ - ನನ್ನ ಭಕ್ತರೊಂದಿಗೆ ಅತ್ತ್ಯುತ್ತಮ ವಾದದ್ದೇ ಆಗುವುದು. ಗೊಂದಲಗೊಂಡ ಮನಸ್ಸು ಈ ಪರಿಕಲ್ಪನೆಯನ್ನು ಮುರಿಯುತ್ತದೆ. ಎಲ್ಲಾ ಆಯ್ಕೆಗಳನ್ನು ತೂಗಿ ನೋಡಿ ಮತ್ತು ಒಂದು ಹಾದಿ ಆಯ್ಕೆ ಮಾಡಿಕೊಳ್ಳಿ ಹಾಗೂ ಗುರುದೇವ ರಿಗೆ ಸಮರ್ಪಿಸಿ. ಭಯ ಮತ್ತು ಚಿಂತೆ ಏನಾದರೂ ಸಮಸ್ಯೆಗಳನ್ನು ನಿಮ್ಮ ಜೀವನದಲ್ಲಿ ನಿವಾರಿಸಿದೆಯಾ? ಇಲ್ಲಾ, ಅದು ಕೇವಲ ಸಮಸ್ಯೆ ಯನ್ನು ಹೆಚ್ಚು ಮಾಡಿದೆ. ಚಿಂತೆ ಮಾಡಿ, ನೀವು ಕೇವಲ ಚಿಂತೆಯ ಮತ್ತು ಭಯದ ಬೀಜವನ್ನು ನೆಡುತ್ತಿದ್ದೀರಿ, ಅದು ಯಾವ ಸಂದರ್ಭದಲ್ಲಿಯೂ ಸಹಾಯ ಮಾಡದು. ನಿಮ್ಮ ಪ್ರಾಣ ಶಕ್ತಿಯನ್ನು ಸಾಧನೆ ಮಾಡಿ ಹೆಚ್ಚಿಸಿಕೊಳ್ಳಿ. ಹೆಚ್ಚು ಪ್ರಾಣ ಇರುವಾಗ ತೆಗೆದುಕೊಂಡ ನಿರ್ಧಾರಗಳು ಒಳ್ಳೆಯ ಫಲಿತಾಂಶ ನೀಡುವುದು. ಉದ್ದೇಶ, ಗಮನ ಮತ್ತು ಅಭಿವ್ಯಕ್ತ ಗುರಿಯೆಡೆಗೆ ಇರುವ ದಾರಿಯಾಗಿದೆ.
Comments