ಏಕೆಂದರೆ ದೇವರು ನಮಗೆ ಬುದ್ಧಿಯನ್ನು ಕೂಡ ಕೊಟ್ಟಿದ್ದಾರೆ (ವ್ಯತ್ಯಾಸದ ಶಕ್ತಿಯನ್ನು ಕೂಡ). ಮನಸ್ಸು, ಪಂಚೇದ್ರಿಯಗಳ ಮೂಲಕ ಹೊರ ಜಗತ್ತನ್ನು ಗ್ರಹಿಸುತ್ತದೆ. ಪಂಚೇದ್ರಿಯಗಳು ಇಲ್ಲದೆ ಹೋದರೆ ನಾವು ಯಾವುದನ್ನೂ ಮುಟ್ಟಲಾಗದು, ನೋಡಲಾಗದು, ಕೇಳಲಾಗದು, ರುಚಿ ನೋಡಲಾಗದು ಅಥವಾ ವಾಸನೆ ಗ್ರಹಿಸಲಾಗದು. 5 ಇಂದ್ರೀಯಗಳು ಮನಸ್ಸಿಗೆ ಮಾಹಿತಿಯನ್ನು ಕಳುಹಿಸುತ್ತದೆ. ಮನಸ್ಸಿನಿಂದ ಗ್ರಹಿಸಿದ ಮಾಹಿತಿಯನ್ನು ಬುದ್ದಿ ತಾರತಮ್ಯ ಮಾಡುತ್ತದೆ. ಒಂದು ವೇಳೆ ಮನಸ್ಸಿಗೆ ಐಸ್ ಕ್ರೀಮ್ ಬೇಕು , ಬುದ್ದಿ ಒಂದು ಅಥವಾ ಎರಡು ಸೌಟು ತಿಂದ ನಂತರ ನಿಲ್ಲಿಸು ಎನ್ನುತ್ತದೆ. ಆದರೆ, ಬುದ್ದಿ ಇಲ್ಲದೆ ಹೋದರೆ ಮನಸ್ಸು ಹಾಗೆ ತಿಂತಾನೇ ಇರುತ್ತೆ. ಅದಕ್ಕೆ ಮನಸ್ಸು, ಬುದ್ದಿ, ಚಿತ್ತ ಎಲ್ಲವೂ ಅಸ್ತಿತ್ವದ ಸ್ತರಗಳು.
ಸಹಜವಾಗಿಯೇ ಮನಸ್ಸಿನ ಗುಣವೇ ಕುಣಿಯುವುದು ಅಲೆದಾಡುವುದು ಮತ್ತು ಅದು ಹಾಗೆಯೇ ಇರಬೇಕು. ಉದಾಹರಣೆಗೆ ನೀವು ಕೋಣೆಯಲ್ಲಿ ಕೂತಿದ್ದೀರಿ ಮತ್ತು ಒಂದು ಹಾವು ಒಮ್ಮೆಲೆ ಅಲ್ಲಿ ಬರುತ್ತೆ. ಏಕೆಂದರೆ ಮನಸ್ಸು ಅಲ್ಲಿ ಇಲ್ಲಿ ಕಣ್ಣಾಡಿಸುವುದರಿಂದ , ಅದು ತಕ್ಷಣ ಪ್ರತಿಕ್ರಿಯಿಸಿ ಬುದ್ಧಿಗೆ ಸಂದೇಶ ನೀಡುತ್ತದೆ. ಅದು ನಿಮಗೆ ತಿರುಗಿ ನಿಮಗೆ ಓಡು ಎಂದು ಹೇಳುತ್ತದೆ. ಮನಸ್ಸು ಇಲ್ಲದಿದ್ದರೆ , ನೀವು ಏನೂ ಗ್ರಹಿಸುವುದಿಲ್ಲ ಮತ್ತು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವಿರಿ. ನಿಮ್ಮ ಯೋಚನೆಗಳನ್ನು ನೀವು ನಿಯಂತ್ರಿಸಿದರೆ ಸ್ವರ್ಗ, ಅದೇ ಯೋಚನೆಗಳು ನಿಮ್ಮನ್ನು ನಿಯಂತ್ರಿಸಿದರೆ ನರಕ.
ಮನಸ್ಸು ಮಗುವಿನ ಹಾಗೆ ಸ್ವತಂತ್ರವಾಗಿ ಬಿಟ್ಟರೆ ಗಲಾಟೆ ಮಾಡುತ್ತದೆ. ಹೀಗಾಗಿ ನಿಮ್ಮ ಬುದ್ಧಿವಂತಿಕೆ ಉಪಯೋಗಿಸಿ ಮನಸ್ಸಿಗೆ ಸರಿಯಾದ ದಾರಿ ತೋರಿಸಿ. ಮನಸ್ಸಿಗೆ ವಿಶ್ರಾಂತಿ ನೀಡಲು ಧ್ಯಾನ ಮಾಡಿ, ಬುದ್ದಿಯನ್ನು ಚುರುಕು ಮಾಡಲು ಜ್ಞಾನದಲ್ಲಿ ಇರಿ, ಸಂಗೀತ ಮಿದುಳು ಮತ್ತು ಹೃದಯವನ್ನು ಸಮತೋಲನ ಗೊಳಿಸಲು.
Comentários