top of page
Divyapaada

ನಾನು ಕರ್ತೃವಲ್ಲಾ ಎಂದಾದರೆ ನಾನು ಹೇಗೆ ಕರ್ಮಗಳನ್ನು ಸಂಗ್ರಹಿಸುತ್ತೇನೆ?





ಒಳ್ಳೆಯ ಪ್ರಶ್ನೆ. ಇದು ತುಂಬಾ ಸೂಕ್ಷ್ಮ. ಈಗ ನೀವು ಒಳ್ಳೆ ಅಡುಗೆ ಮಾಡ್ತೀರಾ ಅಂದುಕೊಳ್ಳೋಣ., ನೀವು ತುಂಬಾ ಸಲ ಬಿಸಿಬೇಳೆಬಾತ್ ಮಾಡಿರ್ತೀರಾ ಮತ್ತು ಪ್ರತಿ ಬಾರಿ ರುಚಿ ಒಂದೇ ರೀತಿ ಇರುತ್ತದೆಯೇ ? ಕೆಲವೊಮ್ಮೆ ತುಂಬಾ ರುಚಿಯಾಗಿರುತ್ತೆ, ಕೆಲವೊಮ್ಮೆ ಸಾಧಾರಣ, ಕೆಲವೊಮ್ಮೆ ಉಪ್ಪು ಕಡಿಮೆ ಆಗುತ್ತೆ, ಕೆಲವೊಮ್ಮೆ ಏನಾದ್ರು ಹಾಕೋದು ಮರೆಯುತ್ತೀರಾ. ಅಲ್ವಾ ? ಈಗ ನೀವೇ ಮಾಡೋದಾದ್ರೆ ಪ್ರತಿ ಸಲ ಅಡುಗೆ ಮಾಡಿದಾಗ ಅಡುಗೆ ಒಂದೇ ರುಚಿ ಹೊಂದಿರಬೇಕಲ್ಲವೇ ? ಕೆಳಗೆ ನೋಡಿ.

ಇಡೀ ಜಗತ್ತು ಪಂಚಭೂತಗಳಿಂದ (ತತ್ವ) ಮಾಡಿದ್ದಾಗಿದೆ. ಭೂಮಿ, ವಾಯು, ಜಲ, ಅಗ್ನಿ ಮತ್ತು ಆಕಾಶ. 3 ಪ್ರಕೃತಿಗಳಿವೆ ವಾತ, ಪಿತ್ತ, ಕಫ. ಪ್ರತಿಯೊಬ್ಬ ವ್ಯಕ್ತಿ ಕೂಡ ಈ ತತ್ವಗಳು, ಪ್ರಕೃತಿಗಳು ಮತ್ತು ವಿಕೃತಿಗಳ ವಿಭಿನ್ನ ಸಂಯೋಜನೆಯಿಂದ ಮಾಡಲಾಗಿದೆ. ನಿಮ್ಮ ದೇಹ ಮತ್ತು ಮನಸ್ಸು ಇವುಗಳಿಂದ ಪ್ರಭಾವಿತಗೊಳ್ಳುತ್ತವೆ. ಎಲ್ಲಾ ತತ್ವಗಳು ತಮ್ಮ ಪ್ರಕೃತಿಯಂತೆ ವರ್ತಿಸುತ್ತವೆ. ವಾಯು (ಗಾಳಿ) ತಿರುಗುತ್ತಿದೆ, ನೀರು ಹರಿಯುತ್ತಿದೆ, ಆಕಾಶ(ಖಾಲಿ ಜಾಗ) ಎಲ್ಲೆಡೆಯೂ ಇದೆ. ನಿಮ್ಮ ದೇಹದಲ್ಲಿ , ಹೃದಯ ತನ್ನಷ್ಟಕ್ಕೆ ಮಿಡಿಯುತ್ತಿದೆ, ರಕ್ತ ಹರಿಯುತ್ತಿದೆ, ಒಂದು ಪ್ರಮಾಣದ ತಾಪಮಾನವಿದೆ. ನಿಮಗೆ ಯಾವುದರ ಮೇಲೂ ನಿಯಂತ್ರಣವಿಲ್ಲ.

ನೀವು ಅಲುಗಾಡದೆ ಕೂತಿದ್ದೀರಾ ಮತ್ತು ಒಮ್ಮೆಲೆ ವಾಯು ತತ್ವ ಪ್ರಬಲವಾಗುತ್ತದೆ, ನಿಮಗೆ ದೇಹ ಅಲುಗಾಡಿಸಬೇಕು ಅನ್ನಿಸುತ್ತದೆ, ಮನಸ್ಸು ಕೂಡ ಸ್ವಲ್ಪ ಅಲುಗಾಡುವುದು. ಯಾವಾಗ ಅಗ್ನಿ ತತ್ವ ಪ್ರಬಲಗೊಳ್ಳುವುದೋ ನಿಮಗೆ ಕೋಪ ಬರುತ್ತದೆ, ಆಕಾಶ ತತ್ವ ಪ್ರಬಲವಾಗಿದ್ದಾಗ ಪ್ರೀತಿ ಇತ್ಯಾದಿ.

ಹೀಗಾಗಿ ಎಲ್ಲವೂ ತಮ್ಮ ಪ್ರಕೃತಿಗನುಸಾರವಾಗಿ ನಡೆಯುತ್ತವೆ. ನೀವು ನಿಮ್ಮಲ್ಲಿ ಈ ತತ್ವಗಳು ಮತ್ತು ಅದರ ಭಾವನೆಗಳನ್ನು ಗುರುತಿಸುತ್ತೀರೊ, ನೀವು ಕೋಪ, ಮೋಹ, ಭಯ ಇತ್ಯಾದಿಯಲ್ಲಿ ಬಂಧಿತರಾದಂತೆ ಅನಿಸುತ್ತದೆ. ನೀವು ತತ್ವಗಳನ್ನು ಗುರುತಿಸುವುದು ಪುನರಾವರ್ತನೆಯಾದಾಗ , ಮನಸ್ಸಿನ ಮೇಲೆ ಗುರುತು ಮೂಡಿಸಲು ಕಾರಣವಾಗಿ ಕರ್ಮ ಮತ್ತು ಬಂಧನಕ್ಕೆ ಈಡಾಗುತ್ತೀರಾ.

ಹೀಗಾಗಿ ಎಲ್ಲಿಯವರೆಗೆ ಚೈತನ್ಯದ ಸಾಕ್ಷಿಭಾವದಲ್ಲಿ ಇರುವುದಿಲ್ಲವೋ, ನೀವು ಮುಕ್ತಿ ಪಡೆಯುವುದಿಲ್ಲ ಮತ್ತು ನೀವೇ ಕರ್ತೃ ವೆಂದು ತಿಳಿಯುತ್ತೀರಿ.

ಒಮ್ಮೆ ಅರಿವಾದರೆ ನೀವು ಕೇವಲ ಸಾಕ್ಷಿ ಮತ್ತು ಕರ್ತೃವಲ್ಲಾ ಎಂದು( ಬಿಸಿಬೇಳೆ ಬಾತ್ ನದ್ದು 😊) ,ಆಗ ಕರ್ಮ ಸೇರಿಕೊಳ್ಳುವುದಿಲ್ಲ.

ಅಷ್ಟಾವಕ್ರ, ಯೋಗ ವಶಿಷ್ಟ ಪ್ರತಿದಿನ ಕೇಳಿ. ಆಗ ನಿಮಗೆ ಗೊತ್ತಾಗುತ್ತೆ ಮನಸ್ಸು ಎನ್ನುವುದೇ ಭ್ರಮೆಯೆಂದು.

1 view0 comments

Comments


Post: Blog2_Post
bottom of page