ನಾನು ಕಡಿಮೆ ಯೋಚನೆ ಮಾಡಬೇಕು ಮತ್ತು ನನ್ನ ಆಲೋಚನೆಗಳನ್ನು ನಿಯಂತ್ರಿಸಬೇಕು. ನಾ ಹೇಗೆ ಮಾಡಲಿ?
- Divyapaada
- Jul 1, 2020
- 1 min read

ಕಡಿಮೆ ಯೋಚಿಸಲು ಕಾರ್ಯೋನ್ಮುಖರಾಗಿ. ಚಟುವಟಿಕೆಯಿಂದ ಇರಿ. ನೀವು ಸುಮ್ಮನೆ ಕೂತಷ್ಟು, ನಿಮ್ಮ ಆಲೋಚನೆಗಳು ಮತ್ತಿಷ್ಟು ಕಾಡಿಸುತ್ತವೆ. ಬಿಡುವಿಲ್ಲದಂತೆ ಇರಿ.
ನಿಮ್ಮ ಯೋಚನೆಗಳು/ಮನಸ್ಸಿನ ನಿಯಂತ್ರಣದಿಂದ ಹೊರಬರಲು ಯೋಗ, ಪ್ರಾಣಾಯಾಮ, ಉಸಿರಾಟದ ಪ್ರಕ್ರೀಯೆ ಮತ್ತು ಧ್ಯಾನ ವನ್ನು ಮಾಡಿ. ಅರಿವು ಮತ್ತು ಭಕ್ತಿಯಿಂದ ನೀವು ನಿಮ್ಮ ಮನಸ್ಸನ್ನು ನಿಮ್ಮ ಆಪ್ತ ಮಿತ್ರನಾಗಿ ಮಾಡಿಕೊಳ್ಳಬಹುದು. ಜ್ಞಾನ, ಯೋಗ, ಸೇವೆ, ಭಕ್ತಿ ಇಲ್ಲದೆ ಮನಸ್ಸು ನಿಯಂತ್ರಣ ತಪ್ಪುತ್ತದೆ ಮತ್ತು ಅದು ನಿಮ್ಮ ಪರಮ ಶತ್ರು ಆಗಬಹುದು.
Comments