ನಾನು ಏನಾದರೂ ಒಳ್ಳೆ ಕೆಲಸ ಮಾಡಬೇಕು ಎಂದುಕೊಂಡರೆ, ಕುಟುಂಬದವರು ನಕಾರಾತ್ಮಕವಾಗಿ ಮಾತನಾಡುತ್ತಾರೆ.
- Divyapaada
- Jun 27, 2020
- 1 min read
ಹೀಗಾಗಿ ನಾನು ಆಸಕ್ತಿ ಕಳೆದುಕೊಳ್ಳುತ್ತೇನೆ. ದಯವಿಟ್ಟು ಇದರಿಂದ ಹೇಗೆ ಹೊರ ಬರುವುದೆಂದು ತಿಳಿಸಿ?

ಉತ್ತರ: ಎಲ್ಲಾ ನಕಾರಾತ್ಮಕ ವಿಷಯಗಳು ಗಿಡಕ್ಕೆ ಗೊಬ್ಬರವಿದ್ದಂತೆ. ಕೆಟ್ಟ ವಾಸನೆ ಹೊಂದಿದ್ದರೂ, ಕೊನೆಯಲ್ಲಿ ಹೂವು ಅರಳಲು ಸಹಾಯ ಮಾಡುತ್ತದೆ ಮತ್ತು ಪರಿಮಳ ಬೀರುತ್ತದೆ. ನಿಮ್ಮ ಕುಟುಂಬದವರು ಒಂದೇ ದಾರಿಯಲ್ಲಿ ಇಲ್ಲದೇ ಹೋದಾಗ ಅವರನ್ನು ಒಪ್ಪಿಸುವುದೊಂದು ಸವಾಲು. ಒರಟು ಜನ ಮತ್ತು ನಕಾರಾತ್ಮಕ ಜನ ನಮ್ಮೊಳಗಿನ ಕಲೆಯನ್ನು ಹೊರ ತರುತ್ತಾರೆ. ನಿಮ್ಮ ನಗು ಮತ್ತು ಉತ್ಸಾಹವನ್ನು ನಕಾರಾತ್ಮಕ ಮಾತುಗಳಿಂದ ಕಳೆದುಕೊಳ್ಳಬೇಡಿ. ನಿಮ್ಮ ನಗು ಹಾಗೆಯೇ ಇರಲಿ. ಕೆಲವೊಮ್ಮೆ ಅವರ ಮಾತು ಒಪ್ಪಿಕೊಳ್ಳಿ ಮತ್ತು ಕೆಲವೊಮ್ಮೆ ಬುದ್ಧಿವಂತಿಕೆಯಿಂದ ನಿಭಾಯಿಸಿ. ಇದು ಸೈಕಲ್ ಅನ್ನು ಸರಿದೂಗಿಸಿದಂತೆ. ನೀವು ಸಾಧನೆ, ಸೇವೆ ಮತ್ತು ಸತ್ಸಂಗ ಹೆಚ್ಚು ಮಾಡಿದಷ್ಟು , ಧ್ಯಾನವನ್ನು ಹೆಚ್ಚು ಮಾಡಿದಷ್ಟು , ಜನ ನಿಮ್ಮಲ್ಲಿ ಬದಲಾವಣೆಯನ್ನು ಗಮನಿಸುತ್ತಾರೆ ಮತ್ತು ನಿಮ್ಮದು ಅಲುಗದ ನಗುವಾದಾಗ ನಿಧಾನವಾಗಿ ಅವರು ಕೂಡ ಸಮರ್ಥಿಸುವರು. ಅಲ್ಲಿಯವರೆಗೆ, ತಾಳ್ಮೆಯಿಂದಿರಿ, ಜ್ಞಾನವನ್ನು ಹೊಂದಿರಿ. ಅದೇನೇ ಬರಲಿ ನಿಮ್ಮ ಬದ್ಧತೆ ಬಿಡದಿರಿ. ನಿಮ್ಮ ಸಂಕಲ್ಪವನ್ನು ಬಲಿಷ್ಟಗೊಳಿಸಿ.
Comments