top of page
Divyapaada

ಧ್ಯಾನ ದ ಹೊರತಾಗಿ ಯಾವ ಮಂತ್ರವನ್ನು ಪಠಿಸಬಹುದು. ತ್ರ್ಯಯಂಬಕಂ, ಗಾಯತ್ರಿ ಅಥವಾ ಓಂ ನಮಃ ಶಿವಾಯ?



ಉತ್ತರ : ಗುರೂಜಿ ಯವರೊಡನೆ ಧ್ಯಾನ ಮಾಡುತ್ತಿರುವುದು ಉತ್ತಮ ವಿಚಾರ. ಹೌದು, ಧ್ಯಾನ ದೊಂದಿಗೆ ಮಂತ್ರ ಪಠಣೆ ಖಂಡಿತ ಸಹಕಾರಿ.

1. *ಓಂ ನಮಃ ಶಿವಾಯ ಪ್ರಬಲವಾದ ಮಂತ್ರ. ಗುರೂಜಿ ಧ್ವನಿಯಲ್ಲಿ ದೀರ್ಘ ಮಂತ್ರೋಚ್ಚಾರ ಮಾಡುವ ಸಲಹೆ ನಾ ಕೊಡುವೆ. ಮಂತ್ರ ಪಠಿಸುತ್ತಾ ಧ್ಯಾನಕ್ಕೆ ಜಾರಬಹುದು. ಇದು ಪಂಚಭೂತಗಳಲ್ಲಿ ಸಾಮರಸ್ಯವನ್ನು ತರುತ್ತದೆ.

*ನಿಮಗೆ ಗಾಯತ್ರಿ ಮಂತ್ರದ ದೀಕ್ಷೆಯಾದಲ್ಲಿ ಖಂಡಿತವಾಗಿಯೂ ಮಾಡಬಹುದು. ಇದು ಕಲ್ಮಶಗಳನ್ನೆಲ್ಲಾ ತೊಳೆದು ಮನಸ್ಸನ್ನು ಶುದ್ಧ ಮಾಡುವುದು. ಇದು ನಿಮ್ಮ ಬುದ್ಧಿಮತ್ತೆಯನ್ನು ಚುರುಕು ಗೊಳಿಸುತ್ತದೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಚೈತನ್ಯವನ್ನು ನೀಡುತ್ತದೆ. ಸಂಧ್ಯಾವಂದನೆ ಈ ಸಮಯದಲ್ಲಿ ಅತ್ತ್ಯುತ್ತಮ.

* ತ್ರ್ಯಯಂಬಕಂ ಅಥವಾ ಮೃತ್ಯಂಜಯ ಮಂತ್ರ ಕೂಡ ಪರ್ಬಲವಾದದ್ದು. ರುದ್ರಾಭಿಷೇಕ ದಲ್ಲಿ ಉಪಯೋಗಿಸುತ್ತಾರೆ. ನೀವು ಯಾವುದಾದರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಆಗ ನಿರ್ದಿಷ್ಟವಾಗಿ ಇದನ್ನು ಪಠಿಸಬಹುದು.

ಈ ಮೇಲಿನ ಎಲ್ಲಾ ಮಂತ್ರಗಳು ಕೂಡ ಬಹಳ ಪ್ರಬಲ ಮತ್ತು ಪ್ರಭಾವಶಾಲಿಯಾಗಿವೆ. ನಾನು ಸಲಹೆ ನೀಡುವುದು

1. ಗುರುದೇವರ ಧ್ವನಿಯಲ್ಲಿ. ಧ್ಯಾನ ಅದೆಲ್ಲಕ್ಕಿಂತ ಶ್ರೇಷ್ಟ. ಎಲ್ಲಾ ಮಂತ್ರಗಳ ಮೂಲ ಉದ್ದೇಶ ಮನಸಿನ ಮಿತಿ ಮೀರಿ ಧ್ಯಾನಕ್ಕೆ ಸಹಾಯ ಮಾಡುವುದು. "ಮನನಾತ್ ತ್ರಾಯತೆ ಇತಿ ಮಂತ್ರಾಹ".

2. ಮತ್ತು 3. ನಿಮ್ಮಪ್ರಾಮುಖ್ಯತೆಮತ್ತುಸಮಯದಮೇಲೆಅವಲಂಬಿತ. ಆದರೆಮೊದಲನೆಯದುಮಾತ್ರಖಂಡಿತವಾಗಿಯೂತಪ್ಪಿಸಬೇಡಿ

27 views0 comments

Comments


Post: Blog2_Post
bottom of page