ದೀರ್ಘ ಕಾಲದ ವರೆಗೆ ಏನಾದರೂ ಮಾಡಿದರೆ ನನಗೆ ಬೇಜಾರು ಬರುತ್ತದೆ. ಅದರಿಂದ ಹೊರ ಬರುವುದು ಹೇಗೆ ?
- Divyapaada
- Jul 1, 2020
- 1 min read

ನಾನು ಪ್ರತಿದಿನ 5 ರಿಂದ 6 ಪ್ರಶ್ನೆಗಳಿಗೆ ಉತ್ತರಿಸುತ್ತಲಿದ್ದೇನೆ, ನನಗೆ ಬೇಜಾರಾಗ್ತಿದೆ ಮತ್ತು ಈ ಪ್ರಶ್ನೆಗೆ ಉತ್ತರಿಸಲು ಮನಸಿಲ್ಲ ಅಂತ ಹೇಳಿದರೆ ಹೇಗೆ ಇರುತ್ತೆ ?😊 ನೀವು ಯಾವುದೇ ಕೆಲಸದಲ್ಲಿ ಸಂತೋಷವನ್ನು ಹುಡುಕಿದಾಗ/ ಪಡೆದಾಗ/ ಪಡೆಯಬೇಕೆಂದು ಬಯಸಿದಾಗ, ಖಂಡಿತವಾಗಲು ನಿಮಗೆ ಸ್ವಲ್ಪ ಸಮಯದಲ್ಲಿ ಅಥವಾ ದೀರ್ಘ ಕಾಲದಲ್ಲಿ ಬೇಜಾರು ಬರುತ್ತೆ.
ಬಾಹ್ಯ ಕೆಲಸಗಳು ನಿಮಗೆ ಸೀಮಿತವಾದ ಸಂತೋಷವನ್ನು ನೀಡುತ್ತವೆ. ಅದರ ಬದಲಿಗೆ ನೀವೇ ಸಂತೋಷವಾದಲ್ಲಿ ಮತ್ತು ಯಾವುದೇ ಕೆಲಸ ಮಾಡಿದಲ್ಲಿ ನಿಮಗೆ ಎಂದಿಗೂ ಬೇಸರವಾಗುವುದಿಲ್ಲ. ಇದು ಕರ್ಮ ಯೋಗ. ನಿಮಗೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಬೇಸರವಾಗುತ್ತದೆಯೇ ? ತಾಯಂದಿರು ಎಂದಿಗೂ ನನ್ನ ಮಕ್ಕಳನ್ನು ನೋಡಿಕೊಂಡು ಬೇಸರವಾಯ್ತು ಎನ್ನುವುದಿಲ್ಲ. ಏಕೆಂದರೆ ಅವಳು ಪ್ರೀತಿಗೆ ಬದ್ಧಳಾಗಿದ್ದಾಳೆ. ಹೀಗಾಗಿ ಯಾವುದೇ ಕೆಲಸದಲ್ಲಿ, ತೆಗೆದುಕೊಳ್ಳುವುದರಿಂದ ಕೊಡುವುದರ ಕಡೆಗೆ ಬಂದರೆ, ಆಗ ನಿಮಗೆಂದಿಗೂ ಬೇಜಾರಾಗುವುದಿಲ್ಲ.
ಬೇಜಾರುತನದಿಂದ ಹೊರಬರುವುದು ಹೇಗೆ ? ಬದ್ಧತೆಯಲ್ಲಿ ಬಲಿಷ್ಟವಾಗುವುದರಿಂದ.
ನಿಮ್ಮಬುದ್ಧಿವಂತಿಕೆಗೆಕೆಲಸದನಡುವಿನಲ್ಲಿಅಲ್ಪವಿರಾಮವನ್ನುನೀಡಿ. ಸಾಮಾನ್ಯದಿನಚರಿಯಿಂದಹೊರಬರಲುಸ್ವಲ್ಪಸೃಜನಶೀಲರಾಗಿ. ಕೆಲಸದಲ್ಲಿಸ್ವಲ್ಪತಮಾಷೆಯನ್ನುಸೇರಿಸಿ. ಅಪರೂಪಕ್ಕೆಕೆಲಸದಲ್ಲಿಏನಾದರೂಹುಚ್ಚುತನದ್ದುಮಾಡಿ. ಏನಾದರೂಹೊಸತನ್ನುಕಲಿಯಿರಿ - ಯಾವುದೇಕೆಲಸವನ್ನುಸುಧಾರಿಸಬಹುದು.ನಿಮ್ಮಚೈತನ್ಯಮತ್ತುಉತ್ಸಾಹವನ್ನುನಿಮ್ಮಪ್ರಾಣವನ್ನುಹೆಚ್ಚಿಸಿಕೊಳ್ಳುವಮೂಲಕಹೆಚ್ಚಿಸಿಕೊಳ್ಳಿ. ನಿಮ್ಮಕೆಲಸನಿಮಗೆಅಥವಾಯಾರಿಗಾದರೂಸಹಾಯಮಾಡುತ್ತಿಲ್ಲಎಂದಾದರೆ, ನಿಮ್ಮಶಕ್ತಿಯನ್ನುಕುಂದಿಸುತ್ತಿದೆಎಂದಾದರೆ, ಆಗನೀವುಬದಲಿಸಬಹುದು. ಆದರೆ, ಕೆಲವೊಮ್ಮೆನಿಮಗೆಬೇಜಾರಾದರೂಕೂಡಬೇರೆಯವರಒಳಿತಿಗಾಗಿನೀವುಕೆಲಸವನ್ನುಮುಂದುವರಿಸಬೇಕಾಗುತ್ತದೆ
Commentaires