ನೀವು ಸಕಾರಾತ್ಮಕ ಉದ್ದೇಶ ಮತ್ತು ಯೋಚನೆಗಳನ್ನು ಹೊಂದಬಹುದು. ಆದರೆ, ಉದ್ದೇಶ ಮತ್ತು ಅದರ ಫಲವನ್ನು ಸಮರ್ಪಿಸಿ ಅದು ಸಕಾರಾತ್ಮಕ ಇರಲಿ ಇಲ್ಲವೇ ನಕಾರಾತ್ಮಕ ಇರಲಿ. ಯಾವುದೇ ಯೋಚನೆ, ಉದ್ದೇಶ ಅಥವಾ ಕ್ರೀಯೆ ನಿಮ್ಮ ಮನಸ್ಸಿನಲ್ಲಿ ಗುರುತು ಮೂಡಿಸಿದರೆ ಅದು ಕರ್ಮ. ನಕಾರಾತ್ಮಕ ಕರ್ಮಗಳನ್ನು ಹೇಗಿದ್ದರೂ ತೊಳಿಯಲೇ ಬೇಕು. ಆದರೆ ಗುರುದೇವ್ ಹೇಳುತ್ತಾರೆ ಒಳ್ಳೆಯದನ್ನು ಕೂಡ ಸಮರ್ಪಿಸಿ ಎಂದು. ಗುರುದೇವ್ ಒಂದು ಒಳ್ಳೆಯ ಉದಾಹರಣೆ ಕೊಡುತ್ತಾರೆ. ನಾವು ಪ್ರತಿದಿನ ದೇಹದ ಮಾಲಿನ್ಯ ತೆಗೆಯಲು ಸೋಪ್ ನಿಂದ ಸ್ನಾನ ಮಾಡುತ್ತೇವೆ. ಆದರೆ ನಾವು ಆ ಸೋಪ್ ಅನ್ನು ಹಿಡಿದುಕೊಂಡು ಕೂಡುವುದಿಲ್ಲ ಅದು ಒಂದು ರೀತಿಯ ವಾಸನೆ ಹೊರಡಿಸುತ್ತೆ. ಹೀಗಾಗಿ ನಾವು ಸೋಪನ್ನು ಕೂಡ ನೀರಿನೊಂದಿಗೆ ತೊಳೆದು ಬಿಡುತ್ತೇವೆ.
Comments