ಮನಸು ಮತ್ತು ವರ್ತಮಾನ ಕ್ಷಣದ ಪರಿಕಲ್ಪನೆಯನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಎಲ್ಲಿಯವರೆಗೆ ಅಚ್ಚುಗಳು ಇರುತ್ತವೆಯೋ ಅಲ್ಲಿಯವರೆಗೆ ಮನಸು ಇರುತ್ತದೆ. ಮನಸು ಹಿಂದಿನ ಅಚ್ಚುಗಳಿಂದ ಮುಕ್ತಿ ಪಡೆದಾಗ, ಅದು ಮನಸಾಗಿ ಉಳಿಯುವುದಿಲ್ಲ. ಯಾವಾಗ ನೀವು ಮನಸಿಲ್ಲದ ಸ್ಥಿತಿ ತಲುಪುವಿರೋ ಆಗ ನೀವು ವರ್ತಮಾನ ಕ್ಷಣದಲ್ಲಿ ಇರುವಿರಿ. ಆಗ ನೀವು ಸ್ವಯಂ (ದೊಡ್ಡ ಮನಸು) ಆಗಿರುವಿರಿ. ಹೀಗಾಗಿ ಇದು ಆ ರೀತಿ ಅಲ್ಲಾ ಈ ರೀತಿ. ಯಾವಾಗ ನೀವು ಹಳೆ ಕರ್ಮಗಳಿಂದ(ಅಚ್ಚು) ಗಳಿಂದ ಮುಕ್ತಿ ಪಡೆಯುವಿರೋ , ಆಗ ನೀವು ವರ್ತಮಾನ ಕ್ಷಣದಲ್ಲಿ ಇರುವಿರಿ.
ವರ್ತಮಾನ ಕ್ಷಣ ಶ್ರಮದಿಂದಲ್ಲಾ. ಶ್ರಮಪಡದಿರುವುದೇ ಮನಸ್ಸನ್ನು ಆರಾಮವಾಗಿರಿಸಲು ಮತ್ತು ಕ್ಷಣದಲ್ಲಿ ಜೀವಿಸಲು ಇರುವ ದಾರಿ. ನೀವು ಮನಸ್ಸಿಗೆ ಹೇಳುತ್ತಾ ಇರಲು ಆಗದು ಈ ಕ್ಷಣದಲ್ಲಿ ಜೀವಿಸು ಎಂದು(ಏಕೆಂದರೆ, ಮನಸಿನ ಮೂಲ ಗುಣವೇ ಚಂಚಲತೆ). ಇದೊಂದು ರೀತಿ ಕ್ಯಾಚ್ 22 (ಆಂಗ್ಲ ಪದ) ಪರಿಸ್ಥಿತಿ. ನೀವು ಯಾವಾಗ ಆತಂಕ, ಭಯ ದಲ್ಲಿ ಇರುತ್ತೀರೋ ಆಗಲೂ ವರ್ತಮಾನದಲ್ಲಿ ಇರುತ್ತೀರಾ. ಆದರೆ ಮನಸಿನ ಆರಾಮದಾಯಕ ಸ್ಥಿತಿ ಅಲ್ಲಾ.
ಮನಸಿನ ಮಿತಿ ಮೀರುವುದೇ ವರ್ತಮಾನ ಕ್ಷಣಕ್ಕೆ ದಾರಿ.
ಕೊನೆಗೆ ನಿಮ್ಮನ್ನು ವರ್ತಮಾನ ಕ್ಷಣದಲ್ಲಿ ಇರದಂತೆ ತಡೆಯುವುದು ಯಾವುದೆಂದರೆ ನಿಮ್ಮ ಅಹಂ, ಬುದ್ದಿ ಮತ್ತು ಆಕಾಂಕ್ಷೆ. ನೀವು ಯಾವಾಗ ತೃಪ್ತರಾಗಿರುತ್ತೀರೋ ( ಯಾವುದೇ ಆಸೆ ಇರದಿದ್ದಾಗ ಅದೇನೆ ಇರಲಿ) ಆಗ ನೀವು ಸಹಜವಾಗಿ ವರ್ತಮಾನ ಕ್ಷಣದಲ್ಲಿ ಇರುವಿರಿ. ನೀವು ಸ್ವತಃ ನಿಮ್ಮ ಕರ್ಮಗಳನ್ನು ಕಳೆಯಲಾಗದು ( ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದು). ದೇವರಿಗೆ, ಗುರುವಿಗೆ ಒಳ್ಳೆಯದು ಕೆಟ್ಟದ್ದು ಎರಡನ್ನೂ ಸಮರ್ಪಿಸಿ, ನಿಮ್ಮ ಕರ್ಮಗಳನ್ನು ನೋಡಿಕೊಳ್ಳುವರು.
Comments