top of page
Divyapaada

ಎಲ್ಲವೂ ಬದಲಾಗುತ್ತಿದ್ದರೆ ನಾ ಹೇಗೆ ಜೀವಿಸಲಿ ? ಈ ಜೀವನವನ್ನು ಸಾಗಿಸಲು ನಾ ಏನನ್ನು ಹಿಡಿದುಕೊಳ್ಳಬೇಕು?




ಯಾವುದನ್ನಾದರು ಹಿಡಿದುಕೊಂಡಿರುವುದೇ ಮೋಹಕ್ಕೆ ಕಾರಣ. ನೀವು ನಿಮ್ಮ ದೇಹವನ್ನು ಶಾಶ್ವತವಾಗಿ ಹಿಡಿದಿಡಬಹುದೇ/ಮೋಹಿಸಬಹುದೇ ? ಒಂದು ದಿನ ದೇಹ ನಿಮ್ಮನ್ನು ಬಿಡುತ್ತದೆ. ಮನಸು ಹೇಗೆ ? ಮನಸ್ಸನ್ನು ಎಂದಿಗೂ ಹಿಡಿದಿಡಲಾಗದು. ಅದು ನಿರಂತರ ಬದಲಾಗುತ್ತಲೇ ಇರುತ್ತದೆ. ನಿಮ್ಮ ಸಂಪತ್ತು, ಸ್ಥಾನ ಮತ್ತು ಅಧಿಕಾರ ? ಅದೆಲ್ಲಾ ತಾತ್ಕಾಲಿಕ. ಸಂಬಂಧಗಳು ಹೇಗೆ ? ಶಾಶ್ವತವಾಗಿ ಉಳಿಯುವುದಿಲ್ಲ. ನಿನ್ನ ಸಂಬಂಧ ಸ್ವತಃ ನಿನ್ನೊಡನೆಯೇ ( ನಿನ್ನ ನೀನು ಹಿಡಿದಿಡು) ಗಟ್ಟಿ ಇದ್ದರೆ ಆಗ ಎಲ್ಲವೂ ನಶ್ವರವಾಗಿ ಕಾಣುತ್ತದೆ. ನಮ್ಮೊಡನೆಯೇ ನಮ್ಮ ಸಂಬಂಧ ಬಲಹೀನವಾಗಿದ್ದರೆ, ಆಗ ನಾವು ಹೊರಗಡೆಯಿಂದ ಜನರು, ಪರಿಸ್ಥಿತಿ ಮತ್ತು ವಸ್ತುಗಳನ್ನು ಹಿಡಿದುಕೊಳ್ಳುತ್ತೇವೆ. ಅದುವೇ ಮೋಹ ಮತ್ತು ದುಃಖಕ್ಕೆ ಮೂಲ ಕಾರಣ. ಸುತ್ತಲೂ ಖಾಲಿ ಜಾಗ ಇರುವಂತೆ, ಅದು ಎಲ್ಲೆಡೆ ಇದೆ ಆದರೆ ಯಾವುದಕ್ಕೂ ಮೋಹಿತಗೊಂಡಿಲ್ಲ. ಗೊತ್ತಾಯ್ತಾ ? ನಮ್ಮೊಳಗಿನ ಆ ಬದಲಾಗದ ಅಂಶವನ್ನು ಹಿಡಿದುಕೊಂಡಿರುವುದೇ ಧ್ಯಾನ. ಅದಕ್ಕಾಗಿಯೇ ಧ್ಯಾನ ವಿಶಾಲ ದೃಷ್ಟಿ ನೀಡುವುದು ಮತ್ತು ನಮ್ಮನ್ನು ಗಟ್ಟಿ ಮಾಡುವುದು ಹಾಗೂ ಯಾವುದಕ್ಕೂ ಯಾರಿಗೂ ಮೋಹಿತರಾಗದಂತೆ ನೋಡಿಕೊಳ್ಳುತ್ತದೆ.

8 views0 comments

Bình luận


Post: Blog2_Post
bottom of page