ನೀಡಿ ಅವರ ಭಾವನೆಗಳಿಗೆ ಧಕ್ಕೆ ತರಬಾರದೋ ಅಥವಾ ಹಿರಿಯರನ್ನು ವಿರೋಧಿಸಿದರೂ ನಾನು ಸರಿ ಅಂದಿಕೊಂಡಿದ್ದನ್ನು ಸಮರ್ಥಿಸಿ ಯಾರಿಂದಲೂ ಸಹಕಾರ ಸಿಗದ ವ್ಯಕ್ತಿಗೆ ಅವಶ್ಯಕ ಸಹಾಯ ಮಾಡುವುದೋ ?
ಉತ್ತರ : ಒಂದು ವೇಳೆ ಬೇರೆಯವರಿಗೆ ಸಹಾಯ ಮಾಡುವುದು ಗುರುವಿನ ಕೆಲಸವಾದಲ್ಲಿ , ನಿಮ್ಮ ಹಿರಿಯರು ವಿರೋಧಿಸಿದರೂ ಪರವಾಗಿಲ್ಲ, ಮಾಡಿ ಎಂದು ಸಲಹೆ ನೀಡುವೆ. ಆದರೆ, ಸಹಾಯ ಮಾಡಲು ಹೋಗಿ ನಿಮ್ಮ ಹಿರಿಯರನ್ನು ತೊಂದರೆಗೆ ಈಡು ಮಾಡುವುದಾದಲ್ಲಿ , ನೀವು ಸಹಾಯ ಮಾಡಲು ಬೇರೆ ದಾರಿಯನ್ನು ಹುಡುಕಿ. ಅದು ಹೇಗೆ ಆಗಿರಲಿ, ಹಿರಿಯರ ಬಗ್ಗೆ ನಿಮ್ಮ ಗೌರವ ಮಾತ್ರ ಕಡಿಮೆ ಆಗಬಾರದು. ನಮ್ಮ ದೃಷ್ಟಿಕೋನ ಸರಿ ಇರಬಹುದು ಆದರೆ ಬೇರೆಯವರ(ಇಲ್ಲಿ ಹಿರಿಯರು) ಜಾಗದಲ್ಲಿ ನಿಂತು ಅವರ ದೃಷ್ಟಿಯಿಂದ ನೋಡಲು ಪಕ್ವತೆ ಬೇಕು.ನೀವು ಎರಡೂ ಕಡೆಯಿಂದ ನೋಡಿದಾಗ, ನೀವು ತಪ್ಪು ಗ್ರಹಿಕೆಗೆ ಯಾವುದೇ ಅವಕಾಶ ನೀಡುವುದಿಲ್ಲ.
ಇವತ್ತಿನ ಘಟನೆ ಉದಾಹರಣೆಗೆ ಸರಿ ಹೊಂದುತ್ತದೆ. ಒಬ್ಬ ಯೋಗ ಶಿಕ್ಷಕರು ಮೈಸೂರಿನಲ್ಲಿ ಲಾಕ್ಡವುನ್ ನಿಂದಾಗಿ ವಾರದ ಹಿಂದೆ ಸಿಕ್ಕಿ ಹಾಕಿಕೊಂಡಿದ್ದರು. ಅವರು ಒಬ್ಬ ಭಕ್ತರ ಮನೆಯಲ್ಲಿ ತಂಗಿದ್ದರು ಆದರೆ ಅವರಿಗೆ ಸ್ವಲ್ಪ ವಯಕ್ತಿಕ ಸಮಯ ಬೇಕಿತ್ತು ( ಅವರಿಗೆ ಅವರದೇ ಆದ ಮಿತಿಯಿರುವುಸರಿಂದ ದೂರಲಾಗದು).
ಇವತ್ತು ಆಶ್ರಮಕ್ಕೆ ಅವರನ್ನು ಕೆಲ ಸೇವೆ ಮಾಡಲೆಂದು ಕರಿಸಿಕೊಳ್ಳುವ ಯೋಚನೆ ಬಂದಿತು. ನಾವು ಗೊಂದಲದಲ್ಲಿ ಇದ್ದೆವು. ಸರ್ಕಾರದ ಲಾಕ್ಡವುನ್ ಮತ್ತು ಗುರುದೇವರ ಸೂಚನೆಯಂತೆ, ನಾವು ಗೇಟ್ ಬಂದು ಮಾಡಿದ್ದೆವು ಮತ್ತು ಆಶ್ರಮದ ಒಳಗೆ ಯಾರಿಗೂ ಇಲ್ಲಿ ನಾವು ಪ್ರವೇಶ ನೀಡುತ್ತಿರಲಿಲ್ಲ ಮತ್ತು ಇಬ್ಬರು ಹಿರಿ ಹೆಂಗಸರು ನಮಗಾಗಿ ಆಹಾರ ತಯಾರಿಸುತ್ತಾರೆ. ಅದರಲ್ಲಿ ಒಬ್ಬರು ನಿನ್ನೆ ರಾತ್ರಿ ಹಲ್ಲು ನೋವೆಂದರು ಹೇಳಿದರು. ನಾವು ಒಬ್ಬರಿಗೆ ಜಾಗ ಕೊಡಬಹುದಿತ್ತು, ಆದರೆ ಅವನು ನಿದ್ದೆಗೆಡಿಸುವ ವ್ಯಕ್ತಿ ಆಗಿದ್ದರೆ (ಸೇವೆ ಮಾಡದೆ ದರ್ಪ ತೋರುವ ) ಮತ್ತು ಆ ಹಿರಿಯರಿಗೆ ಕೇವಲ ತೊಂದರೆ ಆಗುವುದಾದರೆ.
ಗುರುದೇವರ ಕೃಪೆಯಿಂದ ಪಟ್ಟಣದಲ್ಲಿ ಬೇರೊಬ್ಬರ ಮನೆಯಲ್ಲಿ ವ್ಯವಸ್ಥೆ ಆಯಿತು. ಸ್ವಲ್ಪ ಸಮಯಕ್ಕೆ ಬೇಸರ ಆಯಿತು ಆಶ್ರಮದಲ್ಲಿ ಇಟ್ಟುಕೊಳ್ಳಲು ಅಗಲಿಲ್ಲವೆಂದು. ಆದರೆ , ಆಮೇಲೆ ಅನ್ನಿಸಿತು ಇಬ್ಬರು ಹಿರಿಯ ಹೆಣ್ಣುಮಕ್ಕಳಿಗೆ ಮತ್ತಿಷ್ಟು ತೊಂದರೆ ನೀಡದೇ ಹೋದದ್ದು ಸರಿಯಾದ ನಿರ್ಧಾರವೆಂದು.
Комментарии